ಪಾಳುಬಿದ್ದ ಸ್ಥಿತಿಯಲ್ಲಿದ್ದ ಬಸ್ ತಂಗುದಾಣ, ಶೌರ್ಯ ತಂಡದಿಂದ ಸ್ವಚ್ಚತೆ.

ಯಲ್ಲಾಪುರ ತಾಲ್ಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಪಾಳುಬಿದ್ದ ಬಸ್ ತಂಗುದಾಣವನ್ನು ಸ್ವಚ್ಚಗೊಳಿಸಿದರು.

ಬೇಣದ ಗುಳೆ ಎಂಬಲ್ಲಿನ ಬಸ್ ತಂಗುದಾಣವು ಬಹಳ ಹಳೆಯದಾಗಿದ್ದು ಸ್ವಚ್ಚತೆ ಇಲ್ಲದೇ ಹಾಳು ಬಿದ್ದ ಸ್ಥಿತಿಯಲ್ಲಿತ್ತು. ಪ್ರಯಾಣಿಕರು ಆ ಪ್ರದೇಶದಲ್ಲಿ ಬಸ್ ಬರುವಿಕೆಗಾಗಿ ಕಾದು ನಿಲ್ಲುತ್ತಿದ್ದರಾದರೂ ಬಸ್ ತಂಗುದಾಣದಲ್ಲಿ ವಿರಮಿಸಲು ಸಾಧ್ಯವಾಗುತ್ತಿರಲಿಲ್ಲ.
ಪ್ಲಾಸ್ಟಿಕ್ ಬಾಟಲಿಗಳು, ಅನಗತ್ಯ ವಸ್ತುಗಳು ಅಲ್ಲಲ್ಲಿ ಬಿದ್ದಿದ್ದು ತಂಗುದಾಣದೆಡೆಗೆ ಜನರು ಹೋಗಲು ಹಿಂಜರಿಯುತ್ತಿದ್ದರು.

ಬಸ್ ತಂಗುದಾಣವನ್ನು ಗಮನಿಸಿದ ಶೌರ್ಯ ಶ್ರೀ ಧರ್ಮಸ್ಥಳ ಘಟಕ ಮಾವಿನಮನೆ ಇದರ ಸ್ವಯಂಸೇವಕರು ಸ್ವಚ್ಚತೆ ಮಾಡಲು ನಿರ್ಧರಿಸಿ ಶ್ರಮದಾನದ ಮೂಲಕ ಬಸ್ ತಂಗುದಾಣದ ಕಟ್ಟಡ ಸ್ವಚ್ಚಗೊಳಿಸಿ ಸುತ್ತಲಿನ ಪರಿಸರವನ್ನೂ ಸ್ವಚ್ಚಗೊಳಿಸಿದ್ದಾರೆ.

ಸ್ವಯಂಸೇವಕರ ಈ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ. ಮಾವಿನಮನೆ ಘಟಕದ ಸ್ವಯಂಸೇವಕರಾದ ರಾಜೇಶ್ವರಿ, ಈಶ್ವರ, ರಾಘವೇಂದ್ರ, ಯಮುನಾ, ನಾಗರತ್ನ, ಸುಬ್ರಾಯ, ಮಂಜುನಾಥ, ಪಿ. ರಾಮಕ್ರಷ್ಣ ಭಾಗವಹಿಸಿದ್ದರು.