ಅಗಸ್ಟ್, 13, 2024: ಅತಿಯಾದ ಮಳೆ ಗಾಳಿಯಿಂದ ಕೊಪ್ಪ ತಾಲ್ಲೂಕಿನ ಕುದುರೆಗುಂಡಿ ಗ್ರಾಮದ ಕೆರೆಗದ್ಧೆಯ ನಿರ್ಗತಿಕ ವೃದ್ಧೆ ಲಕ್ಷ್ಮಿ ಯವರ ವಾಸದ ಮನೆ ಶಿಥಿಲಗೊಂಡಿದ್ಧು ಮೇಲ್ಚಾವಣಿ ಸಂಪೂರ್ಣ ಹಾಳಾಗಿ ಸೋರುತ್ತಿದ್ದು ವಾಸಕ್ಕೆ ಅನಾನುಕೂಲವಾಗಿ ಪರಿಣಮಿಸಿತ್ತು. ಸೋರುತ್ತಿರುವುದರಿಂದ ತುರ್ತಾಗಿ ರಿಪೇರಿ ಮಾಡುವ ಅಗತ್ಯವಿತ್ತು. ವಾಸ ಮಾಡಲು ಸಾಧ್ಯವಾಗದೇ ಇರುವಂತ ಸ್ಥಿತಿಯಲ್ಲಿ ಬಡ ವೃದ್ಧೆ ಇರುವುದನ್ನು ಗಮನಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ದಿನಾಂಕ -12/08/2024 ರಂದು ಗ್ರಾಮ ಪಂಚಾಯತ್ ಸದಸ್ಯರಾದ ಉಪೇಂದ್ರ ರಾವ್ ರವರ ಸಹಾಯದಿಂದ ಮನೆಗೆ ತಾತ್ಕಾಲಿಕ ಪ್ಲಾಸ್ಟಿಕ್ ಹೊದಿಕೆಯನ್ನು ಅಳವಡಿಸಿರುತ್ತಾರೆ. ಸ್ವಯಂಸೇವಕರ ಈ ಕಾರ್ಯದಿಂದ ವೃದ್ಧೆಗೆ ಅನುಕೂಲವಾಗಿರುತ್ತದೆ. ಒಕ್ಕೂಟದ ಅಧ್ಯಕ್ಷರಾದ ಮನೋಹರ, ಸ್ವಯಂಸೇವಕರಾದ ಪ್ರಕಾಶ್, ಗಿರೀಶ್, ಈಶ್ವರ, ಕೃಷ್ಣಮೂರ್ತಿ, ವಿಜೇಂದ್ರ, ರತ್ನಾಕರ್ ಶ್ರಮದಾನದಲ್ಲಿ ಪಾಲ್ಗೊಂಡರು.