ಬೆಳ್ತಂಗಡಿ, ನವೆಂಬರ್ ೦೪, ೨೦೨೪: ನೇತ್ರಾವತಿ ನದಿಯಲ್ಲಿ ದಂಪತಿಗಳ ಮೃತದೇಹ ಪತ್ತೆಯಾಗಿದೆ. ಚಿಂತಾಮಣಿಯಿAದ ಕಾಣೆಯಾಗಿದ್ದ ದಂಪತಿಗಳ ಮೃತದೇಹ ಇದಾಗಿದೆ ತಿಳಿದುಬಂದಿದೆ.
ನೇತ್ರಾವತಿ ನದಿಯ ದೊಂಡೊಲೆ ಪವರ್ ಪ್ರಾಜೆಕ್ಟ್ ಬಳಿ ಮೃತ ದೇಹ ಪತ್ತೆಯಾಗಿದ್ದು ಚಿಂತಾಮಣಿ ತಾಲ್ಲೂಕಿನ ಮದ್ದಿರೆಡ್ಡಿ (೬೧), ಈಶ್ವರಮ್ಮ (೫೨) ಎಂದು ಗುರುತಿಸಲಾಗಿದೆ.
ಶವ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶೌರ್ಯ ತುರ್ತು ಸ್ಪಂದನಾ ತಂಡದ ಸ್ವಯಂಸೇವಕರು ಪೊಲೀಸರ ಮಾರ್ಗದರ್ಶನದಲ್ಲಿ ಶವ ತೆರವು ಕಾರ್ಯಾಚರಣೆ ನಡೆಸಿದರು.
ಉಜಿರೆ-ಬೆಳಾಲು ಘಟಕದ ರವೀಂದ್ರ, ಸುಧೀರ್, ಸಚಿನ್ ಬಿಡೆ, ನಿಡ್ಲೆ ಘಟಕದ ಗಿರೀಶ್, ಲಿಂಗಪ್ಪ, ಅರಶಿನಮಕ್ಕಿ ಘಟಕದ ಅವಿನಾಶ್ ಬಿಡೆ, ಕಿರಣ್, ಧರ್ಮಸ್ಥಳ ಘಟಕದ ನಳಿನ್ ಬೇಕಲ್, ಗುರುವಾಯನಕೆರೆ ಸಮಿತಿಯ ಕ್ಯಾಪ್ಟನ್ ರಾಘವೇಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸ್ವಯಂಸೇವಕರ ಸಾಹಸ ಚಟುವಟಿಕೆಗೆ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾÊಸ್ ಹಾಗೂ ಪೊಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಜನಜಾಗೃತಿ ಪ್ರಾದೇಶಿಕ ವಿಭಾಗ