ಬಾಳೆಹೊನ್ನೂರು ವ್ಯಾಪ್ತಿಯ ಬನ್ನೂರ್ ಕೂಡಿಗೆ ಬಳಿ ಕೊಳೆತು ನಾರುತ್ತಿದ್ದ ಶವವೊಂದು ತೇಲಿ ಬಂದಿದೆ. ಸ್ಥಳೀಯರು ಬಾಳೆಹೊನ್ನೂರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಪೊಲೀಸ್ ಶೌರ್ಯ ವಿಪತ್ತು ನಿರ್ವಹಣ ಘಟಕಕ್ಕೆ ಮಾಹಿತಿ ಕೊಟ್ಟಿದ್ದಾರೆ. ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಾಳೆಹೊನ್ನೂರು ಶೌರ್ಯ ವಿಪತ್ತು ನಿರ್ವಹಣ ಘಟಕ ಜಂಟಿಯಾಗಿ ಕಾರ್ಯಾಚರಣೆ ಮಾಡಿ ಶವವನ್ನು ದಡಕ್ಕೆ ಮುಟ್ಟಿಸಿ ತದನಂತರ ಆಂಬುಲೆನ್ಸ್ ಗೆ ರವಾನೆ ಮಾಡಿ ಈಗ ಬಾಳೆಹೊನ್ನೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಬಾಳೆಹೊನ್ನೂರು ಪೊಲೀಸ್ ಸಿಬ್ಬಂದಿ ಜತೆ ಸ್ವಯಂ ಸೇವಕರಾದ ಚಂದ್ರಶೇಖರ್ ರೈ, ಸುರೇಶ್ ಕೋಟ್ಯಾನ್, ಪ್ರದೀಪ್, ರಂಜಿತ್,ರಾಕೇಶ್ ಮುಂತಾದವರು ಇದ್ದರು.