
ಶಿರಸಿ ತಾಲ್ಲೂಕಿನ ಹುಲೇಕಲ್ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರವಾಸ ಕೈಗೊಂಡು ಮಾತೃಶ್ರೀ ಅಮ್ಮನವರಿಂದ ಆಶೀರ್ವಾದ ಪಡೆದುಕೊಂಡರು.
ಶೌರ್ಯ ತಂಡದ ಮೂಲಕ ಯುವಕರು ಒಗ್ಗಟ್ಟಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡ ಸ್ವಯಂಸೇವಕರಿಗೆ ಅಮ್ಮನವರು ಅಭಿನಂದನೆ ಸಲ್ಲಿಸಿ, ರಾಜ್ಯದಾದ್ಯಂತ ನಡೆಯುತ್ತಿರುವ ಶೌರ್ಯ ಕಾರ್ಯಕ್ರಮದ ಚಟುವಟಿಕೆಗಳ ಬಗ್ಗೆ ಸಂದೇಶ ನೀಡಿದರು.

ಬೆಳ್ತಂಗಡಿ ತಾಲ್ಲೂಕಿನ ಎಲ್ಲಾ ಘಟಕಗಳು ಬಹಳ ಉತ್ತಮವಾಗಿ ನಡೆಯುತ್ತಿದ್ದು ಅವುಗಳಂತೆ ಶಿರಸಿ ಭಾಗದಲ್ಲಿ ಸೇವಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಸ್ವಯಂಪ್ರೇರಣೆಯಿಂದ ತೊಡಗಿಸಿಕೊಳ್ಳಲು ಮಾರ್ಗದರ್ಶನ ನೀಡಿದರು.
ಘಟಕದ ಸಂಯೋಜಕರು, ಘಟಕ ಪ್ರತಿನಿಧಿ ಮತ್ತು 14 ಮಂದಿ ಸ್ವಯಂಸೇವಕರು ಉಪಸ್ಥಿತರಿದ್ದರು.

ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ ಮತ್ತು ಕಿಶೋರ್ ಕುಮಾರ್ ಉಪಸ್ಥಿತರಿದ್ದರು.