
ಉಡುಪಿ ತಾಲ್ಲೂಕಿನ ಮಣಿಪಾಲ ಘಟಕದ ಸ್ವಯಂಸೇವಕರು ನಂಚಾರು ಬ್ರಹ್ಮಾವರ ಇಲ್ಲಿನ ಗೋಶಾಲೆಗೆ ಹುಲ್ಲಿನ ಮೇವನ್ನು ನೀಡಿರುತ್ತಾರೆ.
ಘಟಕದ ಮಾಸಿಕ ಶ್ರಮದಾನ ಯೋಜನೆಯ ಅಡಿಯಲ್ಲಿ ಹಸಿರು ಹುಲ್ಲುಗಳನ್ನು ಕತ್ತರಿಸಿ ಗೋಶಾಲೆಗೆ ನೀಡಲು ನಿರ್ಧರಿಸಿದ ಸ್ವಯಂಸೇವಕರು ಕೆಲಸ ಮಾಡಿರುತ್ತಾರೆ.

ಹುಲ್ಲು ಸಾಗಿಸುವಲ್ಲಿ ಸ್ಥಳೀಯರಾದ ಸ್ವಸ್ತಿಕ್ ಇವರು ವಾಹನವನ್ನು ಉಚಿತವಾಗಿ ನೀಡಿರುತ್ತಾರೆ. ಸಾಗಾಟದ ವೆಚ್ಚವನ್ನು ಸ್ಥಳೀಯರಾದ ಲೀಲಾದರ್ ಸುವರ್ಣ ಇವರು ನೀಡಿರುತ್ತಾರೆ.

ಮಣಿಪಾಲ ಸಮೀಪದ ಮಂಜುಶ್ರೀ ನಗರದಲ್ಲಿರುವ ಹಸಿರು ಹುಲ್ಲುಗಳನ್ನು ತೆಗೆದು ನೀಡಿರುತ್ತಾರೆ. ಸ್ಥಳೀಯರು ಸಹಕಾರ ನೀಡಿರುತ್ತಾರೆ.

ಸದಾ ಒಂದಲ್ಲ ಒಂದು ವಿಶೇಷ ಸಾಮಾಜಿಕ ಸೇವೆ ಸಲ್ಲಿಸುವ ಸ್ವಯಂಸೇವಕರ ಸೇವೆಯು ಮೆಚ್ಚುಗೆಗೆ ಪಾತ್ರವಾಗಿದೆ.