
ಅಂಕೋಲಾ ತಾಲ್ಲೂಕಿನ ಅಂಬಾರಕೊಡ್ಲು- ಮಾಧವ ನಗರ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ದಿನಾಂಕ 20/09/25 ರಂದು ಶನಿವಾರ ಸಮುದ್ರ ತೀರದಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.
ಅಂತರ ರಾಷ್ಟ್ರೀಯ ಕಡಲ ತೀರದ ಸ್ವಚ್ಛತಾ ದಿನದ ಪ್ರಯುಕ್ತವಾಗಿ ಪರಿಸರ ಸಂರಕ್ಷಣಾ ಗತಿ ವಿಧಿ ಯಿಂದ *ಶ್ರೀ ತಿಮ್ಮಣ್ಣ ಭಟ್* ರವರ ನೇತೃತ್ವದಲ್ಲಿ ಅಂಕೋಲಾ ತಾಲೂಕಿನ ಆರ್.ಎಸ್.ಎಸ್ ಸ್ವಯಂ ಸೇವಕರು, ಹಿತೈಷಿಗಳು, ಗ್ರಾಮಸ್ಥರೊಂದಿಗೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಶ್ರಮದಾನದಲ್ಲಿ ಪಾಲ್ಗೊಂಡರು.

ಅಂಕೋಲಾ ತಾಲ್ಲೂಕಿನ ನದಿಭಾಗ ಕಡಲ ತೀರದುದ್ದಕ್ಕೂ ಹರಡಿರುವ ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಹರಿದ ಮೀನಿನ ಬಲೆ ಚೂರು ಗಳನ್ನು ಆರಿಸಿ ಕಡಲ ತೀರದ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಅಲ್ಲದೇ ಸಮುದ್ರ ತೀರದ ಜನರಿಗೆ ಪರಿಸರದ ಕುರಿತಾಗಿ ಜಾಗೃತಿ ಮೂಡಿಸಲಾಯಿತು.
ಆರ್.ಎಸ್.ಎಸ್ ಸ್ವಯಂಸೇವಕರ ಆಹ್ವಾನದ ಮೇರೆಗೆ ಅಂಬರ್ ಕೊಡ್ಲು ಮಾಧವ ನಗರ ಶೌರ್ಯ ಘಟಕದ ಸ್ವಯಂಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಸ್ವಯಂಸೇವಕರಾದ ಸದಾನಂದ, ಕೇಶವ, ಲಕ್ಷ್ಮಣ, ವಿಷ್ಣು, ವಿನಾಯಕ, ಗಿರೀಶ್ ಭಾಗವಹಿಸಿದ್ದರು.