
ವಿಟ್ಲ ತಾಲ್ಲೂಕಿನ ಕಲ್ಲಡ್ಕ ಸಮೀಪದ ವೀರಕಂಭ ಗಣೇಶ್ ಕೋಡಿ ಎಂಬಲ್ಲಿ ರಾಜೇಶ್ವರಿ ಇವರ ಮನೆಯು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ್ದು ಅವಘಡದ ಪರಿಣಾಮ ಮನೆಯ ವಸ್ತುಗಳು ಬೆಂಕಿಗೆ ತುತ್ತಾಗಿತ್ತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕದ ಸದಸ್ಯರು ಬೆಂಕಿಗೆ ತುತ್ತಾದ ಮನೆಯನ್ನು ಸ್ವಚ್ಚಗೊಳಿಸುವ ಕೆಲಸ ಮಾಡಿದರು
ಸ್ವಯಂಸೇವಕರ ಸೇವೆಯಿಂದ ಹಾನಿಯಾದ ಮನೆಯ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಶೌರ್ಯ ತಂಡದ ಸದಸ್ಯರಾದ ಮಾಧವ, ವಿದ್ಯಾ, ಸೌಮ್ಯ ತುಳಸಿ ಧನಂಜಯ , ಚಿನ್ನು, . ಸತೀಶ ಶ್ರಮದಾನದಲ್ಲಿ ಭಾಗವಹಿಸಿದ್ದರು.