ಬಂಟ್ವಾಳ: ಅಂಗನವಾಡಿ ಕೇಂದ್ರದ ಪರಿಸರದಲ್ಲಿ ಸ್ವಚ್ಚತೆ, ನಾವೂರು ಘಟಕದಿಂದ ಸೇವೆ.

ಬಂಟ್ವಾಳ ತಾಲ್ಲೂಕಿನ ಅಲ್ಲಿಪಾದೆ ಅಂಗನವಾಡಿ  ಕೇಂದ್ರದ ಸುತ್ತ ಬೆಳೆದ ಹುಲ್ಲು ಪೊದೆಗಳನ್ನು ಸ್ವಚ್ಛಗೊಳಿಸುವ ಶ್ರಮದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ನಾವೂರಿನ ಸದಸ್ಯರು ನಡೆಸಿದರು.

ಮಳೆಗಾಲವಾಗಿದ್ದರಿಂದ ಅಂಗನವಾಡಿಯ ಪರಿಸರದಲ್ಲಿ ಗಿಡಗಂಟಿಗಳು, ಪೊದೆಗಳು ಬೆಳೆದು ಮಕ್ಕಳಿಗೆ ಓಡಾಡಲು ಅಪಾಯಕಾರಿಯಾಗಿದ್ದವು.  ಅಂಗನವಾಡಿ ಶಿಕ್ಷಕಿಯ ಮನವಿಯಂತೆ ಶೌರ್ಯ ತಂಡದ ಸ್ವಯಂಸೇವಕರು ಸ್ವಚ್ಚತಾ ಶ್ರಮದಾನವನ್ನು ನಡೆಸಿದ್ದಾರೆ.

ಘಟಕ ಪ್ರತಿನಿಧಿ ಭಾಸ್ಕರ ಕುಲಾಲ್, ಸುಶಾಂತ್, ರಾಮಚಂದ್ರ, ಸಂತೋಷ್, ವಾಮನ ನಾಯ್ಕ, ನವೀನ್ ಶೆಟ್ಟಿ, ಚಂದ್ರಹಾಸ, ದಾಮೋದರ, ಪುಷ್ಪಲತಾ, ವಸಂತಿ ಉಪಸ್ಥಿತರಿದ್ದರು.

Share Article
Previous ಬೆಳ್ತಂಗಡಿ: ಯೋಜನೆಯ ಮಾಶಾಸನ ಫಲಾನುಭವಿಯ ಮನೆ ರಿಪೇರಿ, ಕಣ್ಣಿನ ದೃಷ್ಠಿ ಕಳೆದುಕೊಂಡು ಕಷ್ಠದಲ್ಲಿರುವ ಮಹಿಳೆಗೆ ಮಾನವೀಯತೆ ತೋರಿದ ಶೌರ್ಯ ತಂಡ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved