ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಚೇರ್ಕಾಡಿಯ ಸ್ವಯಂಸೇವಕರು ಸರಕಾರಿ ಪ್ರೌಢಶಾಲೆ, ಕರ್ಜೆಯಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸಿದರು.

ಶಾಲೆಯ ಆವರಣದಲ್ಲಿ 50 ಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನಾಟಿ ಮಾಡಿ ಸುರಕ್ಷತೆಗಾಗಿ ಬೇಲಿ ರಚನೆ ಮಾಡಿರುತ್ತಾರೆ.
ಘಟಕದ ಸದಸ್ಯರಾದ ಶಶಿಧರ, ಶ್ರೀಧರ, ಸುದೀರ, ಸತೀಶ, ಹರೀಶ, ಸತೀಶ್ ಪುತ್ರನ್, ಛಾಯ, ವಿನಯ, ವಸಂತ ,ಶಶಿಕಲಾ, ಸಂದೀಪ ಗಿಡ ನಾಟಿ ಕಾರ್ಯದಲ್ಲಿ ತೊಡಗಿಕೊಂಡರು.