ಅತಿಯಾದ ಮಳೆಯಿಂದ ಮನೆ ಸೋರತೊಡಗಿತ್ತು. ಮನೆಯೊಳಗೆ ನೀರು. ಕಷ್ಠದಲ್ಲಿ ದಿನದೂಡುವ ಪರಿಸ್ಥಿತಿಯಿತ್ತು. ಮನೆಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸಿದರೆ ನೀರು ನಿಲ್ಲಿಸಬಹುದು. ಮಳೆಗಾಲದಲ್ಲಿ ಮನೆ ರಿಪೇರಿಗೆ ನೆರವಾಗುವಂತೆ ಕೆಲವರಲ್ಲಿ ಕೇಳಿಕೊಂಡರೂ ಉಪಕಾರವಾಗಲಿಲ್ಲ.

ಧರ್ಮಸ್ಥಳದ ಶೌರ್ಯ ತಂಡಕ್ಕೆ ತಿಳಿಸಿ ಅವರು ಸಹಾಯಕ್ಕೆ ಬರುತ್ತಾರೆ ಎಂದು ಪರಿಚಯದವರೊಬ್ಬರು ಸಲಹೆ ನೀಡಿದಾಗ ಹೆಬ್ರಿ ತಾಲ್ಲೂಕಿನ ದಾಸಗದ್ದೆಯ ರಾಧು ಪೂಜಾರಿ ಇವರು ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕರ್ತರನ್ನು ಸಂಪರ್ಕಿಸಿದ್ದರು.
ಯೋಜನೆಯ ಕಾರ್ಯಕರ್ತರ ಮೂಲಕ ವಿಷಯ ತಿಳಿದ ಕೂಡಲೇ ಸಹಾಯ ಮಾಡಲು ಧಾವಿಸಿದ ಶ್ರೀ ಧರ್ಮಸ್ಥಳ ಶೌರ್ಯ ತಂಡ ಅಜೆಕಾರಿನ ಸದಸ್ಯರು ಮನೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಮನೆ ರಿಪೇರಿ ಮಾಡಿಕೊಟ್ಟಿದ್ದಾರೆ.

ಘಟಕದ ಸಂಯೋಜಕಿ ವಿಜಯ ಕಾಮತ್, ಸದಸ್ಯರಾದ ಪ್ರವೀಣ್, ಸಂಜೀವ, ಅಶೋಕ್, ಕೃಷ್ಣ, ಆದಿತ್ಯ, ಮಲ್ಲಿಕಾ ಹಾಗೂ ರೇಷ್ಮಾ ಮನೆ ರಿಪೇರಿ ಕೆಲಸದಲ್ಲಿ ಪಾಲ್ಗೊಂಡಿದ್ದರು.