ಪುತ್ತೂರು ತಾಲ್ಲೂಕಿನ ಮಣ್ಣಿ ಮೇರು ಎಂಬಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿರುವ ಜಾನಕಿ ಎಂಬವರಿಗೆ ಪಂಚಾಯತ್ ಮತ್ತು ದಾನಿಗಳ ನೆರವಿನಿಂದ ಹೊಸ ಮನೆ ಕಟ್ಟುವ ಕಾರ್ಯ ಮಾಡಲಾಗುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಜತ್ತೂರು ಸದಸ್ಯರು ಮನೆ ರಚನೆಯ ಕೆಲಸಗಳಿಗೆ ಶ್ರಮದಾನ ಮಾಡಿದರು.

ಸ್ವಯಂಸೇವಕರಾದ ಸದಾನಂದ, ಮನೋಜ್ ಕುಮಾರ್ , ಸುರೇಶ್ , ರವೀಂದ್ರ, ಗೋಪಾಲ, ವಾಸುದೇವ , ಸುಜಾತ, ರಾಜೇಶ್,ಹರೀಶ್ ಕೆಲಸದಲ್ಲಿ ಭಾಗವಹಿಸಿದರು.