ಬೆಳ್ತಂಗಡಿ ತಾಲ್ಲೂಕಿನ ನೆರಿಯ, ಚಾರ್ಮಾಡಿ ಗ್ರಾಮಾದ ಸುತ್ತಮುತ್ತ ಅತಿಯಾದ ಮಳೆಯಿಂದ ಕಂಪೌಂಡ್ ಕುಸಿತ, ಮನೆಗೆ ನೀರು ನಿಗ್ಗಿರುವುದು, ಕಾಲುಸಂಕ ಹಾಳಾಗಿರುವ ಘಟನೆಗಳು ನಡೆದಿದೆ.

ಮಾಹಿತಿ ತಿಳಿದ ನೆರಿಯ ಶೌರ್ಯ ತಂಡದ ಸ್ವಯಂಸೇವಕರು ಸ್ಥಳ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಕಾಲು ಸಂಕ ರಿಪೇರಿಗೆ ಹರಿಯುವ ನೀರು ಕಡಿಮೆಯಾದ ಬಳಿಕ ಸಹಕಾರ ನೀಡುವ ಸಿದ್ದತೆಯಲ್ಲಿ ತಂಡದವರು ಇದ್ದಾರೆ. ಗ್ರಾಮದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಇರುವ ಕುಟುಂಬಗಳನ್ನು ಭೇಟಿ ಮಾಡಿ ಯಾವುದೇ ಸಮಸ್ಯೆಗಳು ಉಂಟಾದಲ್ಲಿ ಶೌರ್ಯ ತಂಡದ ಸದಸ್ಯರಿಗೆ ಸಂಪರ್ಕ ಮಾಡುವಂತೆ ಮಾಹಿತಿ ನೀಡಿ ಬಂದಿರುತ್ತಾರೆ.