ಸುಳ್ಯ: ಬಡ ಕುಟುಂಬದ ಮನೆ ಸ್ವಚ್ಚತೆ ಮಾಡಿ ಮಾನವೀಯತೆ ಮೆರೆದ ಮಂಡೆಕೋಲು ಶೌರ್ಯ ತಂಡ.

ಸುಳ್ಯ ತಾಲ್ಲೂಕಿನ ಮಂಡೇಕೋಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ತನ್ನ ಮದುವೆ ಯಾಗದ ಸಹೋದರಿಯ ಜೊತೆ ವಾಸವಾಗಿದ್ದ ಮಂಡೆಕೋಲಿನ ಮಿತಿಲ ನಿವಾಸಿ ಗೋವಿಂದ ನಾಯ್ಕ ರವರು ತಮ್ಮ 55ನೇ ವರ್ಷದಲ್ಲಿ ಇತ್ತೀಚಿಗೆ ಅಕಾಲಿಕವಾಗಿ ನಿಧನರಾಗಿದ್ದು ಬಡ ಕುಟುಂಬದವರಾಗಿದ್ದ ಇವರ ಮನೆ ಸ್ವಚ್ಛತೆ ಕೆಲಸವನ್ನು ಮಾಡಿದ್ದಾರೆ.

ಮನೆಯ ಪರಿಸರದಲ್ಲಿ, ಮನೆಯ ಒಳಭಾಗದಲ್ಲಿ ಸ್ವಚ್ಚತೆ ಮಾಡದೆ ಅಸ್ತವ್ಯಸ್ತವಾಗಿದ್ದು ಶೌರ್ಯ ತಂಡದ ಸದಸ್ಯರು ಸ್ವಯಂಪ್ರೇರಣೆಯಿಂದ ಸ್ವಚ್ಚತೆ ಮಾಡಿರುತ್ತಾರೆ.

ಮೃತರ ಉತ್ತರ ಕ್ರಿಯಾಧಿಕಾರ್ಯ ಕ್ರಮಗಳಿಗೆ ಪೂರ್ವಸಿದ್ಧತೆಯಾಗಿ ಸ್ವಚ್ಛ ಮಾಡುವ ಕೆಲಸವನ್ನು ಶೌರ್ಯ ವಿಪತ್ತು ಘಟಕ ಮಂಡೆಕೋಲು ಇದರ ಸದಸ್ಯರು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಘಟಕದ ಸದಸ್ಯರಾದ ದೇವಿ ಪ್ರಸಾದ್, ಅನಿಲ್ ಕುಮಾರ್, ಜನಾರ್ದನ ಮಿತಿಲ, ನಾಗರತ್ನ, ಪ್ರಿಯ, ಮಂಜುಳಾ, ನಾರಾಯಣಿ, ವೇದಾವತಿ ಶ್ರಮದಾನದಲ್ಲಿ ಭಾಗವಹಿಸಿದರು.

Share Article
Previous ನೆರಿಯ ಗ್ರಾಮದಲ್ಲಿ ಅತಿಯಾದ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಶೌರ್ಯ ತಂಡದ ಸದಸ್ಯರು.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved