ಸುಳ್ಯ ತಾಲ್ಲೂಕು ಪೆರುವಾಜೆಯ ಶಿವರಾಮಕಾರಂತ ಸರಕಾರಿ ಪದವಿ ಕಾಲೇಜು ಸಮೀಪದ ಬಸ್ ತಂಗುದಾಣಕ್ಕೆ ಪ್ರವೇಶಿಸಲು ಕಾಲುವೆ ದಾಟಿ ಹೋಗಲು ವ್ಯವಸ್ಥೆ ಇಲ್ಲದೇ ಕಷ್ಠವಾಗಿತ್ತು.

ಇದನ್ನು ಗಮನಿಸಿದ ಶೌರ್ಯ ತಂಡದ ಸದಸ್ಯರು ಕಾಲುವೆಗೆ ಕಲ್ಲು ಅಳವಡಿಸಿ ಸುಲಭವಾಗಿ ದಾಟುವಂತೆ ಮಾಡಿಕೊಟ್ಟು ಬಸ್ ತಂಗುದಾಣ ಬಳಕೆಗೆ ಅನುಕೂಲವಾಗುವಂತೆ ಮಾಡಿದ್ದಾರೆ.
ಇದೇ ಸಮಯದಲ್ಲಿ ಬಸ್ ಸ್ಟಾಂಡ್ ಸುತ್ತ ಮುತ್ತ ತುಂಬಿದ್ದ ಸೊಪ್ಪು ಹುಲ್ಲುಗಳನ್ನು ತೆಗೆದು ಸ್ವಚ್ಛತೆಯನ್ನು ಮಾಡಿದರು, ವಲಯ ಮೇಲ್ವಿಚಾರಕರು ಉದಯ್ ರವರು ಉಪಸ್ಥಿತರಿದ್ದರು.
ಶೌರ್ಯ ಘಟಕದ ಸದಸ್ಯರಾದ ಪ್ರಿಯಾ ಕೆ, ರಮೇಶ್ ಎಂ, ಶೇಷಪ್ಪ ನಾಯ್ಕ, ಸುಂದರ ನಾಯ್ಕ, ನಾರಾಯಣ ನಾಯ್ಕ, ಧರ್ಮಪಾಲ , ವೀರನಾಥ, ಶ್ರೀನಿವಾಸ ಶ್ರಮದಾನದಲ್ಲಿ ಭಾಗವಹಿಸಿದರು.