ಸುಳ್ಯ ತಾಲ್ಲೂಕಿನ ಪಂಜ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸುಬ್ರಹ್ಮಣ್ಯ ದಿಂದ ಪುತ್ತೂರು ರಸ್ತೆಯ ಪಂಜ ಎಂಬಲ್ಲಿ ರಸ್ತೆಗೆ ಬಿದ್ದ ಮರವನ್ನು ತೆರವು ಮಾಡಿದರು.

ಪಂಜ ಗ್ರಾಮದ ಸಂಗಾತಿ ಸ್ಟೊರ್ ಬಳಿ ರಾತ್ರಿ ಸುರಿದ ಮಳೆಗೆ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಸ್ಥಳೀಯರು ಮರ ತೆರವು ಮಾಡಲು ಶೌರ್ಯ ತಂಡದ ಸಹಕಾರ ಕೇಳಿದ್ದರು. ಸ್ಥಳಕ್ಕೆ ಧಾವಿಸಿದ ಸ್ವಯಂಸೇವಕರು ಗ್ರಾಮ ಪಂಚಾಯತ್ ಸಿಬ್ಬಂದಿ ತಾರಾನಾಥ ಬರೆಮೇಲು ಹಾಗೂ ಸಾರ್ವಜನಿಕರ ಸಹಕಾರದಿಂದ ಮರ ತೆರವು ಮಾಡಿರುತ್ತಾರೆ.

ಘಟಕದ ಸದಸ್ಯರಾದ ನಳಿನಿ . ವಿಶ್ವನಾಥ. ಸುಂದರ ಇವರು ಶ್ರಮದಾನದಲ್ಲಿ ಭಾಗವಹಿಸಿದ್ದರು.