ಆಲಂಕಾರುವಿನ ಶರವೂರು ಎಂಬಲ್ಲಿನ ಎಲ್ಯಕ್ಕ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವಾತ್ಸಲ್ಯ ಮನೆ ಮಂಜೂರಾಗಿದ್ದು ಮನೆ ರಚನೆಗಾಗಿ ಹಳೆ ಮನೆ ತೆರವುಗೊಳಿಸುವಲ್ಲಿ ಕೆಲಸವನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಶ್ರಮದಾನ ನಡೆಸಿದರು.

ಹಳೆಯ ಮನೆಯ ವಸ್ತುಗಳನ್ನು ತೆರವುಗೊಳಿಸಿ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಹೊಸ ಮನೆ ರಚನೆಗೆ ಸ್ಥಳ ಬಿಟ್ಟುಕೊಡಲು ಕೆಲಸ ಮಾಡಿದರು.
ಶೌರ್ಯ ಘಟಕ ಪ್ರತಿನಿಧಿಯಾಗಿ ಹರೀಶ್ ಗೌಡ ಹಾಗೂ ಘಟಕ ಸಂಯೋಜಕರಾದ ಸವಿತಾ ರವರ ನೇತೃತ್ವದಲ್ಲಿ ಹಾಗೂ ಘಟಕದ ಸ್ವಯಂಸೇವಕರು ಕೆಲಸವನ್ನು ನಡೆಸಿದರು .

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರು ಹಾಗೂ ಜ್ಞಾನವಿಕಾಸ ಸಮನ್ಯ ಸಮನ್ವಯಾಧಿಕಾರಿ, ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.
ಸ್ವಯಂಸೇವಕರಾದ ಹರೀಶ ಸವಿತಾ ಶಾಂಭವಿ ಉಮೇಶ ಕವಿತ ಯು ಸಂತೋಷ ಉಪಸ್ಥಿತರಿದ್ದರು.