ವಿಟ್ಲ: ವನದುರ್ಗ ದೇವಸ್ಥಾನದಲ್ಲಿ ಮಾಣಿ ಶೌರ್ಯ ತಂಡದಿಂದ ಶ್ರಮದಾನ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಟ್ಲ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಾಣಿಯ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ವನದುರ್ಗ ದೇವಸ್ಥಾನದಲ್ಲಿ ಕಲ್ಲು ಕಟ್ಟುವ ಕೆಲಸ ಮಾಡಿದರು.

ಮಾಣಿ ಸಮೀಪದ ಶೇರ ಸರೊಳಿಕಾಡುವಿನ ವನದುರ್ಗ ದೇವಸ್ಥಾನದ ಸುತ್ತಲೂ ಪೌಳಿಗೆ ಕಲ್ಲು ಹಾಕುವ ಕೆಲಸವನ್ನು ದೇವಸ್ಥಾನದ ಕಮಿಟಿಯವರ ಮನವಿಯಂತೆ ಮಾಡಿರುತ್ತಾರೆ.

ಘಟಕದ ಸದಸ್ಯರಾದ ಸತೀಶ್ ಬಾಲಕೃಷ್ಣ,ದಿವಾಕರ,ಅಜಿತ್ ಕುಮಾರ್, ಸತ್ಯ ಶಂಕರ ಶ್ರಮದಾನದಲ್ಲಿ ಭಾಗವಹಿಸಿದರು.

ವಲಯದ ಮೇಲ್ವಿಚಾರಕರಾದ ಆಶಾಪಾರ್ವತಿ ಯವರು ಉಪಸ್ಥಿತರಿದ್ದು ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು.

ಶ್ರಮ ಸೇವೆ ಸಲ್ಲಿಸಿದ ಸ್ವಯಂಸೇವಕರಿಗೆ ವನದುರ್ಗ ದೇವಸ್ಥಾನದ ಆಡಳಿತ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

Share Article
Previous ವಿಟ್ಲ: ಸಮುದಾಯ ಆರೋಗ್ಯ ಕೇಂದ್ರದ ಸುತ್ತ ಸ್ವಚ್ಚತೆ; ಅಳಿಕೆ ಘಟಕದಿಂದ ಶ್ರಮದಾನ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved