ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಉಡುಪಿ ತಾಲ್ಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಂಬಾಗಿಲುವಿನ ಸ್ವಯಂಸೇವಕರು ಸಾಮಾಜಿಕ ಸೇವಾ ಚಟುವಟಿಕೆಯ ಭಾಗವಾಗಿ ಗೋವುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ಹುಲ್ಲು ಕಟಾವು ಮಾಡಿ ಗೋಶಾಲೆಗೆ ತಲುಪಿಸಿದರು.

ಅಂಬಾಗಿಲು ಸಮೀಪದ ಲಕ್ಷ್ಮೀ ನಗರ ಎನ್ನುವ ಪ್ರದೇಶದಲ್ಲಿನ ಹುಲ್ಲುಗಳನ್ನು ಕಟಾವು ಮಾಡಿದ ಸ್ವಯಂಸೇವಕರು ಸಂಗ್ರಹಿಸಿದ ಮೇವನ್ನು ನಂದಗೋಕುಲ ಗೋಶಾಲೆಗೆ ನೀಡಿರುತ್ತಾರೆ.
ಘಟಕದ ಸದಸ್ಯರಾದ ರಮಾನಂದ ಸಾಲಿಯನ್. ವಿಶ್ವನಾಥ್, ಉಮೇಶ್ ನಾಯಕ್, ರಾಧಾ, ಸತೀಶ್ ಪೂಜಾರಿ, ರಮೇಶ್ ಕೆಬಿ ಶ್ರಮದಾನದಲ್ಲಿ ಭಾಗವಹಿಸಿದರು.

ಸ್ವಯಂಸೇವಕರ ಸೇವೆಗೆ ಗೋಶಾಲೆಯ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿರುತ್ತಾರೆ.