ಯಶಸ್ವಿಯಾದ ಈಜು ಮತ್ತು ಆಳ ನೀರಿನ ಸುರಕ್ಷತಾ ತರಬೇತಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಡಿಯಲ್ಲಿ ರಚಿಸಲಾದ ಶೌರ್ಯ ತಂಡದಲ್ಲಿ ಈಜು ಪರಿಣತಿ ಹೊಂದಿರುವ ಸ್ವಯಂಸೇವಕರಿಗೆ ವಿಶೇಷವಾದ ಆಳ ನೀರಿನ ಸುರಕ್ಷತಾ ತರಬೇತಿ ಯಶಸ್ವಿಯಾಗಿ ನಡೆಯಿತು.

ನೀರಿನಲ್ಲಿ ಮುಳುಗಿ ಮೃತಪಟ್ಟವರ ಮೃತದೇಹವನ್ನು ತೆಗೆಯಲು ಪೊಲೀಸ್ ಇಲಾಖೆಯಿಂದ ಶೌರ್ಯ ತಂಡದವರ ಸಹಕಾರ ಕೇಳುತ್ತಿದ್ದು ಆಳ ನೀರಿನಲ್ಲಿರುವ ಮೃತದೇಹ ತೆರವಿಗೆ ವಿಶೇಷ ತರಬೇತಿಯ ಅಗತ್ಯವಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಗೌರವಾನ್ವಿತ ಅನಿಲ್ ಕುಮಾರ್ ಎಸ್.ಎಸ್ ರವರ ಆಶಯದಂತೆ, ಅವರ ಮಾರ್ಗದರ್ಶನದಲ್ಲಿ ಎನ್.ಡಿ.ಆರ್.ಎಫ್ ಪಡೆಯ ಮೂಲಕ ಈಜು ಮತ್ತು ಆಳ ನೀರಿನ ಸುರಕ್ಷತಾ ತರಬೇತಿ ನಡೆಯಿತು.

ಉಜಿರೆಯ ಎಸ್.ಡಿ.ಎಮ್.ಶಿಕ್ಷಣ ಸಂಸ್ಥೆಯ ಈಜು ಕೊಳದಲ್ಲಿ ದಿನಾಂಕ: 23.09.2026 ರಿಂದ 24.09.2026 ರ ವರೆಗೆ ನಡೆದ ತರಬೇತಿ ಕಾರ್ಯಾಗಾರವನ್ನು ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಉದ್ಘಾಟನೆ ನಡೆಸಿದರು. ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ. ವಿಶ್ವನಾಥ್ ಪಿ ಇವರು ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು.

ಎನ್.ಡಿ.ಆರ್.ಎಫ್ ಪಡೆಯ ಇನ್ಸಪೆಕ್ಟರ್ ಶ್ರೀ ಶಾಂತಿಲಾಲ್ ಜಟಿಯ ರವರ ನೇತ್ರತ್ವದ ತಂಡ ಎರಡು ದಿನಗಳ ತರಬೇತಿ ನೀಡಿತು.

ಕಾರ್ಯಕ್ರಮದಲ್ಲಿ ಶೌರ್ಯ ತಂಡದ ಸದಸ್ಯರಿಗೆ ಆಳ ನೀರಿನ ಕಾರ್ಯಾಚರಣೆಗೆ ಅಗತ್ಯವಿರುವ ಸ್ಕೂಬಾ ಡೈವಿಂಗ್ ಪರಿಕರಗಳನ್ನು ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ವಿತರಿಸಿದರು.

ಈಜುವಿಕೆಯಲ್ಲಿ ಸನ್ನಿವೇಶ ಆಧಾರಿತ ತುರ್ತು ಪ್ರತಿಕ್ರಿಯೆ, ಸನ್ನಿವೇಶ ಆಧಾರಿತ ಹಗ್ಗ ರಕ್ಷಣೆ, ನೀರಿನ ಸ್ಥಳ ಆಯ್ಕೆ, ಡೈವಿಂಗ್ ಉಪಕರಣಗಳ ಪರಿಚಯ, ಡೈವಿಂಗ್ ತಂತ್ರಗಳು ಮತ್ತು ನೀರೊಳಗಿನ ಕಾರ್ಯಾಚರಣೆಗಳು, ಹಗ್ಗ ರಕ್ಷಣಾ ಸಂಕೇತಗಳು ಮತ್ತು ಡೈವಿಂಗ್ ಸಂಕೇತಗಳು, ನೀರಿನ ಸಂವಹನ ವ್ಯವಸ್ಥೆ, ನೀರೊಳಗಿನ ಡೈವಿಂಗ್ ಸಂಕೇತಗಳು, ನೀರಿನ ಕಾರ್ಯಾಚರಣೆಗಳ ಸಮಯದಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳು, ಬಲಿಪಶುವನ್ನು ಹೊತ್ತೊಯ್ಯುವ ತಂತ್ರಗಳು, ಮೃತ ದೇಹವನ್ನು ಚೇತರಿಸಿಕೊಳ್ಳುವುದು ಮತ್ತು ಸಾಗಿಸುವ ತಂತ್ರಗಳು, ನೀರಿನ ರಕ್ಷಣಾ ಕಾರ್ಯಾಚರಣೆಗಳ ಸಮಯದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ಮುಂತಾದ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ತರಬೇತಿ ನಡೆಸಿದರು.

ಎನ್.ಡಿ.ಆರ್.ಎಫ್ ಪಡೆಯ ಯೋಧರಾದ ಮಹಾಂತೇಶ್, ರಾಗೇರಾಮ್, ಸಾಜಿಕುಮಾರ್, ಹಿಮತ್ ರಾವ್, ಶ್ರೀನಿವಾಸ ಇವರು ಸ್ವಯಂಸೇವಕರಿಗೆ ತರಬೇತಿ ನೀಡಿದರು.

ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ.ಪಾಯ್ಸ್ ರವರು ಶೌರ್ಯ ಸ್ವಯಂಸೇವಕರಿಗೆ ಈಜು ತರಬೇತಿಯ ಉದ್ದೇಶಗಳು, ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಬೆಳ್ತಂಗಡಿ, ಕಾಪು, ಮಡಿಕೇರಿ, ಬೈಂದೂರು, ಹೊನ್ನಾವರ, ಕಳಸ, ಮೂಡಿಗೆರೆ, ಸುಳ್ಯ ತಾಲ್ಲೂಕಿನ 42 ಮಂದಿ ಸ್ವಯಂಸೇವಕರು ತರಬೇತಿಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.

ಬೆಳ್ತಂಗಡಿ ತಾಲ್ಲೂಕಿನ ಯೋಜನಾಧಿಕಾರಿ ಯಶೋಧರ, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ್ ಮತ್ತು ಕಿಶೋರ್ ಕುಮಾರ್, ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್, ಉದಯ್ ಕುಮಾರ್ ಉಪಸ್ಥಿತರಿದ್ದರು.

Share Article
Previous ಎನ್.ಡಿ.ಆರ್.ಎಫ್ ಪಡೆಯ ಇನ್ಸ್ಪೆಕ್ಟರ್ ಶಾಂತಿಲಾಲ್ ಜಟಿಯ ರವರಿಗೆ ಶೌರ್ಯ ಮಾರ್ಗದರ್ಶಕ್ ಪ್ರಶಸ್ತಿ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved