ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ‘ಗಾಂಧಿ ಜಯಂತಿ’ಯಾಗಿ ಅತ್ಯಂತ ಗೌರವದಿಂದ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಣಿಪಾಲದ ಸ್ವಯಂಸೇವಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಚಿ ಕೊಡಿ ಇಲ್ಲಿ ಸ್ವಚ್ಚತಾ ಶ್ರಮದಾನವನ್ನು ನಡೆಸಿ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಸ್ವಯಂಸೇವಕರಾದ ಹರೀಶ್ ಬಾಲಕೃಷ್ಣ ಲೋಕೇಶ್ ಚಂದ್ರಿಕಾ ನಾಯಕ್ ರಾಜೇಶ್ವರಿ ಚಂದ್ರಕಲಾ ದಮಯಂತಿ ಪಾಲ್ಗೊಂಡರು.