ಅಂಕೋಲಾ: ಸ್ವಚ್ಚತಾ ಶ್ರಮದಾನದ ಮೂಲಕ ಗಾಂಧಿ ಜಯಂತಿ ಆಚರಣೆ, ಅಂಕೋಲಾ ಮತ್ತು ಕಣಗಿಲ್ ಶೌರ್ಯ ಘಟಕದಿಂದ ವಿಶೇಷ ಕಾರ್ಯ.

ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ‘ಗಾಂಧಿ ಜಯಂತಿ’ಯಾಗಿ ಅತ್ಯಂತ ಗೌರವದಿಂದ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಣಗಿಲ್ ಬೆಳೆಂಬರ ಮತ್ತು ಅಂಕೋಲಾ ಘಟಕದ ಸ್ವಯಂಸೇವಕರು ಸ್ವಚ್ಚತಾ ಶ್ರಮದಾನವನ್ನು ನಡೆಸಿ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಅಂಕೋಲಾದ ಕರಿಕಲ್ ಬೋಳೆ ಪುರ್ಲಕ್ಕಿಬೇನ ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆ ಮತ್ತು ದೇವಸ್ಥಾನಕ್ಕೆ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಅನಗತ್ಯ ಗಿಡ, ಮುಳ್ಳಿನ ಗಿಡಗಳನ್ನು ತೆರವು ಮಾಡಿದರು.

ಹಾಗೆಯೇ ಕಣಗಿಲ್ ಬೆಳಂಬಾರ ಘಟಕದ ಸ್ವಯಂಸೇವಕರು ಶೇಟಗೇರಿ ಸಮೀಪದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ದಲ್ಲಿ ಶಾಲೆಯ ಪ್ರಧಾನ ದ್ವಾರದ ಎಡ ಬಲ ಗಳಲ್ಲಿ ಮುಳ್ಳಿನ ಗಿಡ ಹಾಗೂ ಬೇಡವಾದ ಇನ್ನಿತರ ಗಿಡ ಗಳನ್ನು ಕಡಿದು ಸ್ವಚ್ಛ ಗೊಳಿಸಿದರು.

 ಈ ಎರಡೂ  ಸ್ವಚ್ಛತಾ ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಊರ ನಾಗರಿಕರು ಭಾಗವಹಿಸಿ ಶ್ರಮದಾನಕ್ಕೆ ಕೈಜೋಡಿಸಿದರು. ಮತ್ತು ಸ್ವಯಂಸೇವಕರ ಸೇವೆಯನ್ನು ಗುರುತಿಸಿ ಸಂತೋಷವನ್ನು ವ್ಯಕ್ತಪಡಿಸಿದರು.

ಅಂಕೋಲಾ ವಲಯದ ಮೇಲ್ವಿಚಾರಕರಾದ ಪರಮೇಶ್ವರ್, ಘಟಕ ಪ್ರತಿನಿಧಿ ಗೋಪಾಲ ಗೌಡ,  ಸ್ವಯಂಸೇವಕರಾದ ರವೀಂದ್ರ ವೆಂಕಟ್ರಮಣ, ರಾಮ, ಶ್ರೀಕಾಂತ್, ಅಂಕೋಲಾ ಘಟಕದ ಸದಸ್ಯರಾದ ನಾಗರಾಜ್ ಐಗಳ್, ಪ್ರಕಾಶ್ ಆಗೇರ್, ಅಶೋಕ್ ಆಗೇರ್, ಸಂತೋಷ್ ಗೌಡ, ದಿವ್ಯಾ ಆಗೇರ್, ಪ್ರವೀಣ್ ಆಗೇರ್ ರವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

Share Article
Previous ಅಂಕೋಲಾ: ಅಂತರರಾಜ್ಯ ಮಟ್ಟದ ಅಣಕು ಕಾರ್ಯಾಚರಣೆ ಮತ್ತು ತರಬೇತಿ,

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved