ಬಂಟ್ವಾಳ: ಕಾಡಬೆಟ್ಟು ಗುತ್ತು ದೈವಸ್ಥಾನದ ಪರಿಸರ ಸ್ವಚ್ಛಗೊಳಿಸಿದ ಶೌರ್ಯ ಸ್ವಯಂಸೇವಕರು; ಸ್ವಯಂಪ್ರೇರಿತ ಶ್ರಮದಾನದ ಮೂಲಕ ಸಾಮಾಜಿಕ ಕಳಕಳಿ ಮೆರೆದ ಕಾಡಬೆಟ್ಟು ಶೌರ್ಯ ಘಟಕದ ಸದಸ್ಯರು

ಬಂಟ್ವಾಳ: ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿರುವ ಶ್ರೀ ಧರ್ಮಸ್ಥಳ ‘ಶೌರ್ಯ’ ವಿಪತ್ತು ನಿರ್ವಹಣಾ ಘಟಕದ ಕಾಡಬೆಟ್ಟು ಘಟಕದ ಸ್ವಯಂಸೇವಕರು ಸ್ವಯಂಪ್ರೇರಿತವಾಗಿ ಶ್ರಮದಾನ ನಡೆಸಿ ಕಾಡಬೆಟ್ಟು ಗುತ್ತು ದೈವಸ್ಥಾನದ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಕಾಡಬೆಟ್ಟು ಗುತ್ತು ದೈವಸ್ಥಾನದ ಸುತ್ತಮುತ್ತ ಬೆಳೆದಿದ್ದ ಹುಲ್ಲು ಹಾಗೂ ಅನಗತ್ಯ ಗಿಡಗಂಟಿಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛ ಹಾಗೂ ಅಚ್ಚುಕಟ್ಟಾಗಿಸುವ ಕಾರ್ಯವನ್ನು ಶೌರ್ಯ ಘಟಕದ ಸದಸ್ಯರು ಕೈಗೊಂಡರು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಾರ್ವಜನಿಕ ಹಾಗೂ ಧಾರ್ಮಿಕ ಸ್ಥಳಗಳ ಸ್ವಚ್ಛತೆಗೆ ಕೈಜೋಡಿಸುವ ಉದ್ದೇಶದಿಂದ ಸ್ವಯಂಸೇವಕರು ಈ ಶ್ರಮದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಈ ಶ್ರಮದಾನದಲ್ಲಿ ಬಂಟ್ವಾಳ ತಾಲ್ಲೂಕು ಸಮಿತಿಯ ಮಾಸ್ಟರ್ ಪ್ರವೀಣ್, ಘಟಕದ ಪ್ರತಿನಿಧಿ ಸಂಪತ್ ಶೆಟ್ಟಿ ಹಾಗೂ ಸದಸ್ಯರಾದ ಅಶೋಕ ಹಾರೊದ್ದು, ರೋಹಿತ್, ಚಿದಾನಂದ ಶೆಟ್ಟಿ, ಮಹಾಬಲ ರೈ ಮತ್ತು ನಾರಾಯಣ ಪೂಜಾರಿ ಭಾಗವಹಿಸಿ ಸೇವೆ ಸಲ್ಲಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳ ಜೊತೆಗೆ ಪರಿಸರ ಸ್ವಚ್ಛತೆ, ಸಾರ್ವಜನಿಕ ಸ್ಥಳಗಳ ನಿರ್ವಹಣೆ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿಯೂ ಶೌರ್ಯ ಸ್ವಯಂಸೇವಕರು ತೊಡಗಿಸಿಕೊಂಡಿದ್ದು  ಸಮುದಾಯದಲ್ಲಿ ಸೇವಾ ಮನೋಭಾವನೆಯಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Share Article
Previous ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರೊಂದಿಗೆ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂವಾದ ಸ್ವಯಂಸೇವಕರ ಸೇವಾ ಕಾರ್ಯಗಳಿಗೆ ಮೆಚ್ಚುಗೆ – ಆಶೀರ್ವಾದಪೂರ್ವಕ ಮಾರ್ಗದರ್ಶನ

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Canara Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved