ಮೃತ ದೇಹವನ್ನು ಮೇಲಕ್ಕೆತ್ತಿದ ಶೌರ್ಯ ತುರ್ತು ಸ್ಪಂದನಾ ತಂಡ
ಬೆಳ್ತಂಗಡಿ, ನವೆಂಬರ್ 03, 2023: ಬೆಳಾಲು ಗ್ರಾಮದ ಮಾಚಾರ್ ನ ಕೆಂಪನೊಟ್ಟು ಎಂಬಲ್ಲಿ ವಿವಾಹಿತ ಮಹಿಳೆಯ ಮೃತ ದೇಹ ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ನವೆಂಬರ್ 1 ರಂದು ನಡೆದಿದ್ದು ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಬಳಿಕ ಉಜಿರೆ ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಿಗೆ ಮೃತ ದೇಹ ಮೇಲೆತ್ತಲು ಸಹಕಾರ ನೀಡುವಂತೆ ದೂರವಾಣಿ ಕರೆ ಮಾಡಿದ್ದು ಸ್ಪಂದಿಸಿದ ಸ್ವಯಂಸೇವಕರು ಸ್ಥಳಕ್ಕೆ ಧಾವಿಸಿ ಸಹಕಾರ ನೀಡಿರುತ್ತಾರೆ.
ಕೆಂಪನೊಟ್ಟು ಸುಧಾಕರ್ ನಾಯ್ಕರ ಪತ್ನಿ ಶಶಿಕಲಾ(25) ಬಾವಿಯಲ್ಲಿ ಶವವಾಗಿ ಪತ್ತೆಯಾದ ಮಹಿಳೆಯಾಗಿದ್ದು ಧರ್ಮಸ್ಥಳ S.I. ಅನಿಲ್ ಕುಮಾರ್, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಬಂಟ್ವಾಳ DySP ಥೋರಟ್, ಮಂಗಳೂರಿನಿಂದ ಅರುಣ್ ರವರ ನೇತೃತ್ವದಲ್ಲಿ ವಿಧಿ ವಿಜ್ಞಾನ ತಂಡ ಮತ್ತು ಪೋಲೀಸರ ತಂಡ ಸ್ಥಳದಲ್ಲಿದ್ದರು.
ಪೊಲೀಸ್ ಅಧಿಕಾರಿಗಳ ಸಲಹೆಯಂತೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಉಜಿರೆ-ಬೆಳಾಲು ಘಟಕದ ಸ್ವಯಂಸೇವಕರು ಆಳವಾದ ನೀರಿರುವ ಬಾವಿಯಿಂದ ಮೃತದೇಹವನ್ನು ಮೇಲಕ್ಕೆ ಎತ್ತುವ ಯಶಸ್ವೀ ಕಾರ್ಯಾಚರಣೆ ನಡೆಸಿದರು.
ಕಾರ್ಯಾಚರಣೆಯಲ್ಲಿ ಶೌರ್ಯ ತುರ್ತು ಸ್ಪಂದನಾ ತಂಡದ ಬೆಳಾಲು ಘಟಕದ ಮುಳುಗು ತಜ್ಞ ಹರೀಶ ಕೂಡಿಗೆ, ಸಂಜೀವ ಕೋಲ್ಪಾಡಿ, ಸಂತೋಷ ಮಾಚಾರ್, ಸುಲೈಮಾನ್ ಬೆಳಾಲು, ಸಂತೋಷ ಕನೆಕ್ಕಿಲ, ಜಗದೀಶ್ ಪಲ್ಲಿದಡ್ಕ, ಶಶಿಧರ ಶಾಂತಿನಗರ ಹಾಗೂ ಉಜಿರೆ ಘಟಕದ ರವೀಂದ್ರ ಉಜಿರೆ, ವೇಣೂರ್ ಘಟಕದ ರಾಘವೇಂದ್ರ ರವರು ಪಾಲ್ಗೊಂಡಿದ್ದರು.
ನೆರೆದಿದ್ದ ಸಾರ್ವಜನಿಕರು ಮತ್ತು ಪೊಲೀಸರು, ಬೆಳಗ್ಗಿನಿಂದ ಸಂಜೆ ತನಕ ಹಾಜರಿದ್ದು ಮೃತದೇಹವನ್ನು ಬಾವಿಯಿಂದ ಮೇಲಕ್ಕೆ ಎತ್ತಿ, ಬಳಿಕ ಮಹಜರು ಮುಗಿದ ಮೇಲೆ ಆಂಬುಲೆನ್ಸ್ ಗೆ ರವಾನಿಸಿಕೊಟ್ಟ ಶೌರ್ಯ ಸ್ವಯಂ ಸೇವಕರ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ರವರು ಬೆಳಾಲು ಶೌರ್ಯ ತಂಡದವರ ಬಗ್ಗೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಜೊತೆ ಬಹಳ ಕೊಂಡಾಡಿದರು.
ವರದಿ. ಸುಲೈಮಾನ್ ಬೆಳಾಲು, ಸಂಯೋಜಕರು, ಉಜಿರೆ ಬೆಳಾಲು ಶೌರ್ಯ ಘಟಕ.