
“ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಪುಷ್ಪಾ ಹನುಂತ ನಾಯ್ಕ್ ಇವರು ತನ್ನದೇ ಆದ ಸ್ವ ಉದ್ಯೋಗವನ್ನು ಆರಂಭಿಸಿ ಯಶಸ್ವೀಯಾಗಿದ್ದಾರೆ. ಭಟ್ಕಳ ತಾಲ್ಲೂಕಿನ ಬೆಂಗ್ರೆ ಗ್ರಾಮದವರಾದ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೂರ್ಯೋದಯ ಪ್ರಗತಿಬಂಧು ಸಂಘದ ಸದಸ್ಯರೂ ಆಗಿದ್ದಾರೆ.
ಪ್ರಿಂಟಿAಗ್ ಪ್ರೆಸ್ ನಲ್ಲಿ ಕೆಲಸ ಮಾಡಿದ್ದರು: ಡಿಸೈನಿಂಗ್ ಕೆಲಸದಲ್ಲಿ ಪರಿಣತಿ ಹೊಂದಿರುವ ಇವರು ಮಣಿಪಾಲದ ಪ್ರಿಂಟಿAಗ್ ಪ್ರೆಸ್ ನಲ್ಲಿ ಒಂದು ವರ್ಷ ಹಾಗೂ ಭಟ್ಕಳದ ಪ್ರಿಂಟಿAಗ್ ಪ್ರೆಸ್ ನಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದರು. ಡಿಸೈನಿಂಗ್ ಕೆಲಸಗಳಲ್ಲಿ ಪರಿಣತಿ ದೊರಕಿದ ನಂತರ ಸ್ವಂತ ಅಂಗಡಿ ತೆರೆಯಲು ಯೋಚಿಸಿ, ತನ್ನದೇ ಸ್ವಂತ ಉದ್ಯೋಗ ಆರಂಭಿಸಿ ಯಶಸ್ಸು ಗಳಿಸಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಪ್ರಗತಿಬಂಧು ಸಂಘದ ಸದಸ್ಯರಾದ ಇವರು ಸ್ವ ಉದ್ಯೋಗ ಆರಂಭಿಸಲು ಸಂಘದಿAದ ೩ ಲಕ್ಷ ಸಾಲವನ್ನು ಪಡೆದಿದ್ದಾರೆ. ಯೋಜನೆಯಲ್ಲಿ ನೀಡಲಾಗುವ ತರಬೇತಿಗಳು, ನಡೆಸಲಾಗುವ ಪ್ರೇರಣಾ ಶಿಭಿರಗಳು ನನಗೆ ಸ್ವಂತ ಉದ್ಯೋಗದ ಕನಸು ಕಾಣಲು ಸಹಕಾರಿಯಾಯಿತು’ ಎನ್ನುತ್ತಾರೆ ಪುಷ್ಪಾ ನಾಯ್ಕ್.
ಶೌರ್ಯ ತಂಡದ ಸಂಯೋಜಕಿ: ಭಟ್ಕಳ ತಾಲ್ಲೂಕಿನಲ್ಲಿ ಪ್ರವಾಹದಂತಹ ಸಮಸ್ಯೆಗಳು ಮಳೆಗಾಲದಲ್ಲಿ ಸಂಭವಿಸುತ್ತಿರುತ್ತವೆ. ಈ ಕಾರಣದಿಂದ ಗ್ರಾಮಾಭಿವೃದ್ಧಿ ಯೋಜನೆಯಿಂದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನರ್ವಹಣಾ ಕಾರ್ಯಕ್ರವನ್ನು ಆರಂಭಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇವರು ಶೌರ್ಯ ಘಟಕದಲ್ಲಿ ತಂಡದ ನಾಯಕತ್ವ ವಹಿಸಿ ೧೫ ಜನರ ತಂಡವನ್ನು ಮುನ್ನಡೆಸುತ್ತಿದ್ದಾರೆ. ೫ ವರ್ಷಗಳಲ್ಲಿ ನೂರಾರು ವಿಪತ್ತು ನಿರ್ವಹಣಾ ಚಟುವಟಿಕೆಗಳನ್ನು ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಇವರ ನೇತ್ರತ್ವದ ಶೌರ್ಯ ಘಟಕ ನಡೆಸಿದೆ.
ಯಶಸ್ವೀ ಉದ್ಯಮ: ಇವರು ನಡೆಸುವ ಡಿಸೈನಿಂಗ್ ಸ್ವ ಉದ್ಯೋಗ ಯಶಸ್ವೀಯಾಗಿದೆ. ನಿರಂತರ ಆದಾಯ ತಂದುಕೊಡುತ್ತಿದೆ. ಎಡಿಟಿಂಗ್ ಕೌಶಲ್ಯದ ನಿಪುಣತೆಯನ್ನು ಗಮನಿಸಿ ಹೆಚ್ಚು ಆರ್ಡರ್ ಗಳು ಬರುತ್ತಿವೆ. ಬ್ಯಾನರ್, ಪ್ಲೆಕ್ಸ್, ಕಟೌಟ್ಗಳು, ಆಮಂತ್ರಣ ಪತ್ರಿಕೆಗಳು, ಬಿಲ್ ಪುಸ್ತಕ, ಪಾಂಪ್ಲೆಟ್, ರಶೀದಿ ಪುಸ್ತಕ ಇತ್ಯಾದಿಗಳ ಆರ್ಡರ್ ಗಳನ್ನು ಇವರು ನಿರಂತರವಾಗಿ ಪಡೆದುಕೊಳ್ಳುತ್ತಿದ್ದಾರೆ.
ಸ್ವಂತ ಉದ್ಯೋಗ ಆರಂಭಿಸಲು ಕಾರಣ ಶೌರ್ಯ ತಂಡ: ಭಟ್ಕಳದ ಪ್ರಿಂಟಿAಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಸ್ವಂತ ಉದ್ಯೋಗ ಆರಂಭಿಸಲು ಮಾಹಿತಿ ನೀಡಿದವರು ಶೌರ್ಯ ಘಟಕದ ಸ್ವಯಂಸೇವಕರು. ಸ್ವಂತ ಉದ್ಯೋಗ ಆರಂಭಿಸಲು ಪೂರಕವಾದ ಎಲ್ಲಾ ವ್ಯವಸ್ಥೆಗಳಿಗೆ ಸಹಕಾರ ನೀಡುತ್ತೇವೆ ಎಂದು ಪ್ರೇರಣೆ ನೀಡಿದರು. ಇದರಿಂದ ಧೈರ್ಯದಿಂದ ಸ್ವ ಉದ್ಯೋಗ ಆರಂಭಿಸಲು ಈ ಹಿಂದೆ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಬಂದು ತಮ್ಮ ಊರಿನಲ್ಲಿಯೇ ಬಾಡಿಗೆ ಕಟ್ಟಡವನ್ನು ಪಡೆದು ಉದ್ಯೋಗ ಆರಂಭಿಸಿದರು. ಸ್ವಯಂಸೇವಕರು ಮತ್ತು ಅವರ ಪರಿಚಯಸ್ಥರಿಂದ ಪ್ರಿಂಟ್ ಆರ್ಡರ್ ಗಳು ಆರಂಭದಲ್ಲಿ ಬರತೊಡಗಿದ್ದು ನಂತರದಲ್ಲಿ ಪ್ರಚಾರ ಜಾಸ್ತಿಯಾಗುತ್ತಿದ್ದಂತೆಯೇ ಕೆಲಸ ನಿರಂತರವಾಗಿ ಸಿಗುತ್ತಿದೆ. ಶೌರ್ಯ ಸಂಘಟನೆಯ ಅಭಿಮಾನದಿಂದಾಗಿ ತಮ್ಮ ಅಂಗಡಿಗೆ ಶೌರ್ಯ ಡಿಜಿಟಲ್ ವರ್ಡ್ ಎಂದು ಹೆಸರು ಇಟ್ಟಿದ್ದಾರೆ.
ಶೌರ್ಯ ಘಟಕದ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳುವ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ಇವರ ಸಾಧನೆಯನ್ನು ಗಮನಿಸಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್. ವಿ ಪಾÊಸ್ ಇವರು ಅಂಗಡಿಯನ್ನು ಭೇಟಿ ನೀಡಿ ಶುಭ ಹಾರೈಸಿದ್ದಾರೆ. ತಮ್ಮ ಉದ್ಯೋಗದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲ ಇವರಲ್ಲಿದೆ.