ಸಾಮಾಜಿಕ ಪ್ರಜ್ಞೆ ಮೆರೆದ ಬೆಲ್ಮನ್ ಸೂಡ ಘಟಕದ ಸ್ವಯಂಸೇವಕರು

ಕಾಪು, ಮಾರ್ಚ್, 04, 2025: ಹಿಂದೂ ರುದ್ರ ಭೂಮಿಯ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಚತಾ ಶ್ರಮದಾನವನ್ನು ನಡೆಸಿದ ಶೌರ್ಯ ಶ್ರೀ ಧರ್ಮಸ್ಥಳ ಘಟಕದ ಸ್ವಯಂಸೇವಕರು ತಮ್ಮ ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ.
ರುದ್ರಭೂಮಿಯನ್ನು ಸಂಪರ್ಕಿಸುವ ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಂಟಿ ಗಳು ಬೆಳೆದಿದ್ದು ಜನರ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಅಲ್ಲದೇ ಮರಗಳ ಕೊಂಬೆಗಳು ರಸ್ತೆಗೆ ಬಾಗಿಕೊಂಡಿದ್ದು, ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು. ಸಾರ್ವಜನಿಕರಿಂದ ೀ ಪ್ರದೇಶದಲ್ಲಿ ಸ್ವಚ್ಚತೆ ಮಾಡುವ ಬಗ್ಗೆ ಮನವಿ ಕೇಳಿಬರುತ್ತಿತ್ತು.

ಪ್ರತಿ ತಿಂಗಳು ಒಂದರಂತೆ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದಿರುವ ಬೆಲ್ನಣ್ ಸೂಡ ಘಟಕದ ಸ್ವಯಂಸೇವಕರು ಫೆಬ್ರವರಿ ತಿಂಗಳ ಶದರಮದಾನದ ಅಂಗವಾಗಿ ರುದ್ರಭೂಮಿ ಸಂಪರ್ಕ ರಸ್ತೆಯನ್ನು ಸ್ವಚ್ಚಗೊಳಿಸುವ ನಿರ್ಧಾರ ಕೈಗೊಂಡಿದ್ದರು.
ಒಂದು ದಿನದ ಶ್ರಮದಾನವನ್ನು ನಡೆಸಿದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಬೆಲ್ಮಣ್ ಸೂಡ ಘಟಕದ ಸ್ವಯಂಸೇವಕರು ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛ ಗೊಳಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಘಟಕದ ವತಿಯಿಮದ ಗಿಡಗಳನ್ನು ನಾಟಿ ಮಾಡಲಾಗಿತ್ತು. ಗಿಡಗಳು ಬೆಳೆಯುತ್ತಿದ್ದು ಗಿಡದ ಬುಡದಲ್ಲಿ ಮಣ್ಣು ಬಿಡಿಸಿಕೊಡುವ ಕೆಲಸ ಮಾಡಲಾಯಿತು. ಸಸಿಗಳ ಸುತ್ತ ತುಂಬಿಕೊಂಡ ಪೊದೆ ಗಳನ್ನು ಬಿಡಿಸಿ ಗಿಡದ ಬೆಳವಣಿಗೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಘಟಕದ ಸಂಯೋಜಕಿ ರಜನಿ, ಸ್ವಯಂಸೇವಕರಾದ ಜೆರಾಲ್ಡ್, ಸುರೇಶ ನಾಯ್ಕ್, ವಿಜಯ್ ಕೃಷ್ಣ, ಸೂರಜ್, ವನಜ, ಶ್ರೀನಾಥ್ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ವರದಿ: ಜನಜಾಗೃತಿ ಪ್ರಾದೇಶಿಕ ವಿಭಾಗ