ಮಡಿಕೇರಿ, ನವೆಂಬರ್ 26: ನಾಪೋಕ್ಲು ಚಪ್ಪಂಡಡಿ ಗ್ರಾಮದಲ್ಲಿ ಇರುವಂತಹ ಅಂಗನವಾಡಿಯಲ್ಲಿ ವಿದ್ಯುತ್ ವ್ಯವಸ್ಥೆಯು ಕಳೆದ ಮೂರು ತಿಂಗಳಿನಿಂದ ಇರಲಿಲ್ಲ. ವಿದ್ಯುತ್ ತಂತಿಯ ಮೇಲೆ ಅನಗತ್ಯ ಬಳ್ಳಿಗಳು ಬೆಳೆದು ಅಪಾಯಕಾರಿಯಾಗಿ ಕಾಣುತ್ತಿದ್ದವು. ವಿದ್ಯುತ್ ಇಲಾಖೆಯವರು ತಂತಿಯ ಮೇಲೆ ಬಿದ್ದ ಮರದ ಗೆಲ್ಲುಗಳನ್ನು, ಬಳ್ಳಿಗಳನ್ನು ಕಡಿದರೆ ಮಾತ್ರ ವಿದ್ಯುತ್ ಸರಿ ಮಾಡಲು ಸಾಧ್ಯ ಎಂದು ಹೇಳಿದ ಉದ್ದೇಶದಿಂದ ಅಲ್ಲಿನ ಶಿಕ್ಷಕಿಯಾದಂತಹ ಶ್ವೇತ ಅವರು ಶೌರ್ಯ ತಂಡವನ್ನು ಸಂಪರ್ಕಿಸಿ ಸಹಾಯವನ್ನು ಕೇಳಿದರು. ಆದುದರಿಂದ ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಅಂಗನವಾಡಿಗೆ ಭೇಟಿ ನೀಡಿ ಅಲ್ಲಿ ಕಾಡನ್ನು ಕಡಿದು ವಿದ್ಯುತ್ ಇಲಾಖೆಯವರು ಕರೆಸಿ ಕೆಲಸವನ್ನ ವಿದ್ಯುತ್ ತಂತಿಯನ್ನು ಸರಿಪಡಿಸುವ ಕೆಲಸವನ್ನು ಮಾಡಿದರು. ಅಂಗನವಾಡಿಯ ಸುತ್ತಮುತ್ತ ಬಹಳ ದಟ್ಟವಾಗಿ ಬೆಳೆದಿದ್ದಂತಹ ಕಾಡನ್ನು ಕಡೆದು ಮಕ್ಕಳಿಗೆ ಓಡಾಡಲು ಉತ್ತಮ ರೀತಿಯ ವ್ಯವಸ್ಥೆಯನ್ನ ಮಾಡಿಕೊಡಲಾಯಿತು.
ಸೇವೆಯಲ್ಲಿ ಶೌರ್ಯದ ಶಂಕರ್, ದಿಲೀಶ್, ಮಾಯಿಲಪ್ಪ, ಉಮಾಲಕ್ಷ್ಮಿ, ಚಂದ್ರಕಲಾ, ಸುನೀತಾ, ಸಂಯೋಜಕಿ ದಿವ್ಯ, ಹಾಜರಿದ್ದರು.. ಜೊತೆಗೆ ಅಂಗನವಾಡಿ ಶಿಕ್ಷಕಿಯರಾದ ಶ್ವೇತ ಆಶಾಲತಾ ಗೀತಾ ಜೊತೆಗೆ ಸಹಾಯಕಿ ಗೀತಾ ಅಲ್ಲದೆ ವಿದ್ಯುತ್ ಇಲಾಖೆಯ ಮಝೀಜ್ ಹಾಜರಿದ್ದರು.
ವರದಿ: ದಿವ್ಯಾ, ಸಂಯೋಜಕಿ, ನಾಪೋಕ್ಲು ಘಟಕ