
ಧ್ಯೆರ್ಯ, ಸಾಹಸ ಪ್ರವೃತ್ತಿ ಅಂತ:ಶಕ್ತಿ, ಆತ್ಮಶಕ್ತಿ, ದೇಹಶಕ್ತಿಯ ಮೂಲಕ ಶೌರ್ಯ ತಂಡದ ಸದಸ್ಯರು ಕೈಗೊಳ್ಳುವ ರಕ್ಷಣಾಕಾರ್ಯಗಳು ಜಾತಿ, ಮತ, ತಾರತಮ್ಯ ರಹಿತ ಸೇವೆಯಾಗಿದೆ..
ಆಪತ್ತಿಗೆ ಹೆದರದೆ ಬದುಕು ಕಟ್ಟಿಕೊಟ್ಟು ನೊಂದವರಿಗೆ ಆತ್ಮಸ್ಥೆöÊರ್ಯ ನೀಡುವ ಕೆಲಸವನ್ನು ಶೌರ್ಯ ಸದಸ್ಯರು ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ಪ್ರಾದೇಶಿಕ ವಿಭಾಗದಿಂದ ಧರ್ಮಸ್ಥಳದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಛೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಶೌರ್ಯ ತುರ್ತುಸ್ಪಂದನೆ ಮತ್ತು ಕೌಶಲಾಭಿವೃದ್ಧಿ ತರಬೇತಿಗೆ ಚಾಲನೆ ಹಾಗೂ ಶೌರ್ಯವಿಪತ್ತು ನಿರ್ವಹಣಾ ಕಾರ್ಯಕ್ರಮದ ೫ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಂಧ್ರಪ್ರದೇಶದ ಗುಂಟೂರಿನ ಎನ್ಡಿಆರ್ಎಫ್ ಟೀಂ ಕಮಾಂಡರ್ ಶಾಂತಿಲಾಲ್ ಜಟಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ಕರ್ನಾಟಕದಲ್ಲಿ ಶೌರ್ಯ ತಂಡ ವರದಾನವಾಗಿದೆ. ಈ ರೀತಿಯ ತಂಡಗಳು ಎಲ್ಲಾ ರಾಜ್ಯಗಳಲ್ಲಿ ಸ್ಥಾಪನೆಯಾದರೆ ಅನುಕೂಲವಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಶೌರ್ಯ ಸ್ವಯಂಸೇವಕರು ಸೇವೆ ಸಲ್ಲಿಸುವುದು ನೋಡಿದಾಗ ಸಂತೋಷವಾಗುತ್ತದೆ. ನಾವು ನೀಡಿದ ತರಬೇತಿ ಅನುಕೂಲಕ್ಕೆ ಬಂದಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀ ಅನಿಲ್ ಕುಮಾರ್ ಎಸ್ ಎಸ್ ರವರು ಮಾತನಾಡಿ, ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಲ್ಲಿ ಶೌರ್ಯ ತಂಡ ಸದಾ ಮುಂಚೂಣಿಯಲ್ಲಿದೆ. ಶೌರ್ಯ ವಿಪತ್ತು ನಿರ್ವಹಣೆ ತಂಡಗಳು ೯೧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಕೋಪದ ಸಂದರ್ಭ ತುರ್ತು ಸೇವೆ ನೀಡುತ್ತಿವೆ ಎಂದರು. ದೇಶದಲ್ಲಿ ಅನೇಕ ಕಂಪನಿಗಳು, ಸಂಘ ಸಂಸ್ಥೆಗಳು ವಿಪತ್ತು ನಿರ್ವಹಣೆಯಲ್ಲಿ ಕೆಲಸ ಮಾಡುತ್ತವೆ. ಶೌರ್ಯ ಸಂಘಟನೆ ವಿಭಿನ್ನವಾಗಿ, ಜನ ಮಾನಸದಲ್ಲಿ ಉಳಿಯುವಂತಹ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು.

ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾÊಸ್ ಸ್ವಾಗತಿಸಿ ಶೌರ್ಯ ಕಾರ್ಯಕ್ರಮದ ಸಾಧನೆಯ ಬಗ್ಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ತುರ್ತು ಸ್ಪಂದನಾ ತಂಡವನ್ನು ರಚಿಸುವ ಬಗ್ಗೆ ತಿಳಿಸಿದರು.

ಡಾ.ಡಿ ವೀರೇಂದ್ರ ಹೆಗ್ಗಡೆಯವರು ಆರಂಭಿಸಿದ ಶೌರ್ಯ ವಿಪತ್ತು ನಿರ್ವಹಣೆ ಯೋಜನೆಗೆ ಐದು ವರ್ಷ ತುಂಬಿದೆ. ೯೧ ತಾಲೂಕುಗಳಲ್ಲಿ ೬೦೪ ಘಟಕಗಳನ್ನು ಹೊಂದಿದ್ದು, ೧೦,೪೬೦ ಸ್ವಯಂಸೇವಕರಿದ್ದಾರೆ. ಈಗಾಗಲೇ ಈ ತಂಡಗಳು೨.೫೦ ಲಕ್ಷಕ್ಕಿಂತ ಅಧಿಕ ವಿಪತ್ತು ನಿರ್ವಹಣೆ ೨ ಲಕ್ಷಕ್ಕಿಂತ ಅಧಿಕ ಸಾಮಾಜಿಕ ಸೇವೆಗಳನ್ನು ನೀಡಿವೆ. ನೆರೆ, ಗುಡ್ಡಕುಸಿತ, ಬೆಂಕಿ ಅನಾಹುತ,ಅಪಘಾತ,ಉರಗ ರಕ್ಷಣೆ,ಮನೆಕುಸಿತ, ಸ್ವಚ್ಚತೆ, ರಕ್ತದಾನ,ಆರೋಗ್ಯ ಶಿಬಿರ, ಮದ್ಯವರ್ಜನ ಶಿಬಿರ, ಪರಿಸರ ಕಾರ್ಯಕ್ರಮ ಮೊದಲಾದ ಕಡೆಗಳಲ್ಲಿ ಆಪತ್ಕಾಲದ ರಕ್ಷಕರಾಗಿ ಶೌರ್ಯ ತಂಡದ ಸದಸ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಯೋಜನೆಗೆ ಶ್ರೀಕ್ಷೇತ್ರ ಧರ್ಮಸ್ಥಳ ೫ ಕೋಟಿ ರೂ ಅನುದಾನ ನೀಡುತ್ತಿದೆ ಎಂದರು.

ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ವಿಪತ್ತು ನಿರ್ವಹಣಾ ಅಧಿಕಾರಿ ವಿಜಯ್ ಪೂಜಾರ್ ರವರು ವಿವಿಧ ರೀತಿಯ ವಿಪತ್ತುಗಳ ಬಗ್ಗೆ ಮಾಹಿತಿ ನೀಡಿದರು. ವಿಪತ್ತು ನಿರ್ವಹಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಯಾವ ರೀತಿಯಲ್ಲಿ ತೊಡಗಿಕೊಂಡಿದೆ ಮಾಹಿತಿ ನೀಡಿದರು. ಸಹಾಯವಾಣಿ ಸಂಪರ್ಕಿಸುವ ಬಗ್ಗೆ ಮಾಹಿತಿ ನೀಡಿದರು.
ವಿನೋದ್, ಅವಿನಾಶ್ ಭಿಡೆ, ವಸಂತಿ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಯಶೋಧರ ಕೆ, ಅಶೋಕ್, ಗಣೇಶ್ ಆಚಾರ್ಯ, ಜೈವಂತ ಪಟಗಾರ, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ,
ವಿಪತ್ತು ನಿರ್ವಹಣಾ ಸೇವೆಯಲ್ಲಿ ಸಾಧನೆ ಮಾಡಿದ ಸ್ವಯಂಸೇವಕ ಉಜಿರೆಯ ರವೀಂದ್ರ, ಅರಸಿಮಕ್ಕಿಯ ಅವಿನಾಶ್ ಭಿಡೆ, ನಾರಾವಿಯ ದಿನೇಶ್ ಶೆಟ್ಟಿ ಮತ್ತು ತೆಂಕಕಾರAದೂರು ವಿಶ್ವನಾಥ್ ಇವರನ್ನು ಗೌರವಿಸಲಾಯಿತು.

ಸಾಧಕ ಸಂಯೋಜಕರನ್ನಾಗಿ ನಡ-ಕನ್ಯಾಡಿ ಘಟಕದ ವಸಂತಿ, ಗುರುವಾಯನಕೆರೆ ಘಟಕದ ಸವಿತಾ ಪಿರೇರಾ ಅವರನ್ನು ಅಭಿನಂದಿಸಲಾಯಿತು.
ಘಟಕಗಳಿಗೆ ಪ್ರಶಸ್ತಿ:
ಶಿಶಿಲ ಅರಸಿನಮಕ್ಕಿ ಘಟಕ ಮತ್ತು ಮಡಂತ್ಯಾರು ಘಟಕಗಳಿಗೆ ಉತ್ತಮ ಸಾಧಕ ಘಟಕ-2024-25 ಪ್ರಶಸ್ತಿ ಪ್ರದಾನಿಸಲಾಯಿತು.