ರಿಪೇರಿ ಮಾಡಿದ ಬಲ್ನಾಡು ಘಟಕದ ಸ್ವಯಂಸೇವಕರು

ಪುತ್ತೂರು, ಮಾರ್ಚ್ 01, ಮನೆಯ ಮಾಡು ಹಳೆಯದಾಗಿದ್ದು ಮನೆಯ ಸಮೀಪವೇ ಇದ್ದ ಮರವೊಂದು ಮನೆಯ ಮೇಲೆ ಬೀಳುವ ಸ್ಥಿತಿಯಲ್ಲಿತ್ತು. ಅಪಾಯವನ್ನು ಅರಿತ ಸ್ವಯಂಸೇವಕ ಕಾರ್ತಿಕ್ ಇವರು ತನ್ನ ಮನೆಯ ಮೇಲ್ಛಾವಣಿ ರಿಪೇರಿಗೆ ಶೌರ್ಯ ಘಟಕದ ಸ್ವಯಂಸೇವಕರ ಸಹಾಯ ಕೇಳಿದ್ದರು.

ಯಾವುದೇ ವಿಪತ್ತುಗಳಾದಾಗ ತಕ್ಷಣ ಧಾವಿಸುವ ಬಲ್ನಾಡು ಘಟಕದ ಸ್ವಯಂಸೇವಕರು ತಮ್ಮದೇ ಘಟಕದ ಸ್ವಯಂಸೇವಕನೋರ್ವ ಸಹಕಾರ ಕೇಳಿದಾಗ ಒಲ್ಲೆಯೆನ್ನಲಿಲ್ಲ. ಹಳೆಯ ಮೇಲ್ಚಾವಣಿಯನ್ನು ತೆರವುಗೊಳಿಸಿ ನವೀಕರಣಗೊಳಿಸಿದ್ದಾರೆ. ಘಟಕದ ಸ್ವಯಂಸೇವಕರಾದ ರೋಷನ್, ಹರಿಪ್ರಸಾದ್, ದಿನೇಶ್, ಹರೀಶ್, ಸುಗಂಧಿ, ಜಗದೀಶ್, ಕಾರ್ತಿಕ್, ಆಶಾಲತಾ ಶ್ರಮದಾನದಲ್ಲಿ ಉಪಸ್ಥಿತರಿದ್ದರು.
