
ಕುಂದಾಪುರ, ಮಾರ್ಚ್ 01, 2025: ಕುಂದಾಪುರ ತಾಲ್ಲೂಕಿನ ಇರಿಗೆ, ಹಳ್ಳಿಹೊಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೇಲಿ ರಚನೆ ಮಾಡಿಕೊಡುವ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ ಶೌರ್ಯ ಶ್ರೀ ಧರ್ಮಸ್ಥಳ ಕಮಲಶಿಲೆ ಘಟಕದ ಸ್ವಯಂಸೇವಕರು.

ಶಾಲೆಯ ಶಿಕ್ಷಕರು ಬೇಲಿ ರಚಿಸಿಕೊಡುವ ಬಗ್ಗೆ ಸ್ವಯಂಸೇವಕರ ತಂಡಕ್ಕೆ ಮನವಿ ಮಾಡಿಕೊಂಡಿದ್ದರು. ಸ್ಪಂದಿಸಿದ ಸ್ವಯಂಸೇವಕರು ಶ್ರಮದಾನದ ಮೂಲಕ ಬೇಲಿ ರಚನೆ ಮಾಡಿದ್ದಾರೆ. ಅಗತ್ಯ ಪರಿಕರಗಳನ್ನು ಶಾಲೆಯಿಂದ ಒದಗಿಸಲಾಗಿದ್ದು ಸ್ವಯಂಸೇವಕರು ಶ್ರಮಸೇವೆ ನೀಡಿದ್ದಾರೆ.

ಶಾಲೆಯ ಆವರಣದಲ್ಲಿ ಸ್ವಚ್ಚತೆ, ನೀರಿನ ಪೈಪ್ ದುರಸ್ಥಿ ಕೆಲಸಗಳನ್ನು ಇದೇ ಸಂದರ್ಭದಲ್ಲಿ ಸ್ವಯಂಸೇವಕರು ಮಾಡಿರುತ್ತಾರೆ. ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಸ್ಥಳೀಯರು ಸ್ವಯಂಸೇವಕರ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾರಾಯಣ ಪಾಲನ್, ವಲಯ ಮೇಲ್ವಿಚಾರಕರಾದ ಸವಿತಾ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿರುತ್ತಾರೆ.
ಘಟಕದ ಸಂಯೋಜಕಿ ಉಮಾ, ಸ್ವಯಂಸೇವಕರಾದ ಮಹೇಶ, ಜಯರಾಮ, ಮಂಜುನಾಥ್, ಶಿನ ಪುಜಾರಿ, ಅಶೋಕ್, ಭಗೀರಥ, ರವಿ ಶ್ರಮದಾನ ನಡೆಸಿದರು.
ವರದಿ: ಜನಜಾಗೃತಿ ಪ್ರಾದೇಶಿಕ ವಿಭಾಗ