ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮ ಅನುಷ್ಠಾನ.

ಕರಾವಳಿ ಪ್ರದೇಶವನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯು ಮಳೆಗಾಲದಲ್ಲಿ ಹೆಚ್ಚಾಗಿ ಪ್ರವಾಹ, ಭೂಕುಸಿತದಂತಹ ವಿಪತ್ತುಗಳನ್ನು ಎದುರಿಸುತ್ತದೆ. ನೇತ್ರಾವತಿ ಮತ್ತು ಗುರುಪುರ ನದಿ ಪಾತ್ರಗಳಲ್ಲಿ ಬರುವ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಡಬ ಮತ್ತು ಉಳ್ಳಾಲ ಭಾಗಗಳಲ್ಲಿ ಸಾಮಾನ್ಯವಾಗಿ ವಿಪತ್ತುಗಳನ್ನು ಕಾಣುತ್ತೇವೆ. ಮಂಗಳೂರು ನಗರದ ಕೆತ್ತಿಕಲ್ ಬೆಟ್ಟ, ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳು ಮತ್ತು ಚಾರ್ಮಾಢಿ ಘಾಟ್ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿದಾಗ ಆಪತ್ತುಗಳು ಸಹಜವಾಗಿ ಘಟಿಸುತ್ತವೆ.

ಆರಂಭ:

ದಕ್ಷಿಣ ಕನ್ನಡ ಜಿಲ್ಲೆಯು ವಿಪತ್ತು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿಟ್ರಸ್ಟ್ ವತಿಯಿಂದ ವಿಪತ್ತು ನಿರ್ವಹಣಾ ತಂಡಗಳನ್ನು 2020 ರಲ್ಲಿ ಆರಂಭಿಸಲಾಗಿದೆ. ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರು, ವಿಟ್ಲ, ಕಡಬ, ಮಂಗಳೂರು ತಾಲ್ಲೂಕುಗಳಲ್ಲಿ 100 ರಿಂದ 200 ಮಂದಿ ಸ್ವಯಂಸೇವಕರನ್ನು ಒಳಗೊಂಡಿರುವ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡವನ್ನು ರಚಿಸಲಾಗಿದೆ.

ಅನುಷ್ಠಾನ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಕ್ರಮ ಅನುಷ್ಠಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ (8217375167) ಮತ್ತು ಎ ಬಾಬು ನಾಯ್ಕ್ (9480366294) ರವರು ಕರ್ತವ್ಯ ನಿರ್ವಹಿಸುತ್ತಿದ್ದು, ಯೋಜನಾಧಿಕಾರಿಗಳಾಗಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಯಶೋಧರ ಕೆ, ಗುರುವಾಯನಕೆರೆಯಲ್ಲಿ ಹರೀಶ್ ಆರ್.ಎಸ್, ಸುಳ್ಯದಲ್ಲಿ ಮಾಧವ ಗೌಡ, ಕಡಬದಲ್ಲಿ ಪ್ರಕಾಶ್ ಕುಮಾರ್, ಪುತ್ತೂರಿನಲ್ಲಿ ಸಶೀಧರ್ ಎಮ್, ವಿಟ್ಲದಲ್ಲಿ ಸುರೇಶ್ ಗೌಡ, ಎಸ್ , ಬಂಟ್ವಾಳದಲ್ಲಿ        ಜಯಾನಂದ, ಮಂಗಳೂರಿನಲ್ಲಿ ಚಂದ್ರಶೇಖರ್   ರವರು ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದ್ದಾರೆ. ಯೋಜನೆಯ ಮೇಲ್ವಿಚಾರಕರು ವಿಪತ್ತು ನಿರ್ವಹಣಾ ಘಟಕಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು ಪ್ರತೀ ಘಟಕಗಳಿಗೆ ಸೇವಾ ಪ್ರತಿನಿಧಿಗಳು ಸಂಯೋಜಕರಾಗಿ ಮತ್ತು ಘಟಕಪ್ರತಿನಿಧಿಗಳು ಸೇವೆ ಸಲ್ಲಿಸುತ್ತಿದ್ದಾರೆ.

ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿಯಿಂದ ವಿಪತ್ತು ನಿರ್ವಹಣಾ ಕಾರ್ಯಕ್ರಮ ಅನುಷ್ಟಾನಕ್ಕೆ ಸಹಕಾರ ನೀಡಲಾಗುತ್ತಿದೆ.

Share Article
Previous ಯಲ್ಲಾಪುರ: ಮಾವಿನಮನೆ ಶೌರ್ಯ ತಂಡದಿಂದ ಶಾಲೆಯ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ; ಶಾಲೆ ಆರಂಭಗೊಂಡ ಹಿನ್ನೆಲೆಯಲ್ಲಿ ಸೇವೆ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved