
ಶಾಲೆ ಆರಂಭಗೊಂಡ ಹಿನ್ನೆಲೆಯಲ್ಲಿ ಶಾಲಾ ಪರಿಸರದಲ್ಲಿ ಸ್ವಚ್ಚಗೊಳಿಸುವ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ ಯಲ್ಲಾಪುರ ತಾಲ್ಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಮಾವಿನಮನೆ ಸ್ವಯಂಸೇವಕರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಚಿಸಲಾದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಲ್ಲಿ ಕಳೆದ 6 ವರ್ಷಗಳಿಂದ ಸ್ವಯಂಸೇವಕರು ಸಾಮಾಜಿಕ ಹಾಗೂ ವಿಪತ್ತು ನಿರ್ವಹಣಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದು, ಸಾಮಾಜಿಕ ಸೇವಾ ಚಟುವಟಿಕೆಗಳ ಭಾಗವಾಗಿ ಶಾಲೆಯ ಸ್ವಚ್ಚತಾ ಶ್ರಮದಾನ ನಡೆಸಿರುತ್ತಾರೆ.

ದಿನಾಂಕ 29/5/2026 ರಂದು ನಡೆದ ಶ್ರಮದಾನದಲ್ಲಿ ವಿಪತ್ತು ನಿರ್ವಹಣಾ ಘಟಕ ಮಾವಿನಮನೆಯ ಸದಸ್ಯರು, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಾಲಾ ಪರಿಸರದಲ್ಲಿನ ಸ್ಥಳ, ಕುಡಿಯುವ ನೀರಿನ ಟ್ಯಾಂಕ್ ಮತ್ತು ತರಗತಿ ಕೋಣೆಯನ್ನು ಸ್ವಚ್ಛಗೊಳಸಲಾಗಿದ್ದು ಮಕ್ಕಳನ್ನು ಸ್ವಾಗತಿಸಲು ಶಾಲೆಯನ್ನು ಸಿದ್ದಗೊಳಿಸಲಾಯಿತು.

ಸ್ವಯಂಸೇವಕರಾದ ರಾಜೇಶ್ವರಿ, ಈಶ್ವರ, ಮಂಜುನಾಥ ಪಿ, ರಾಮಕ್ರಷ್ಣ, ತಿಮ್ಮಣ್ಣ, ಪಾರ್ವತಿ, ಮಂಜುನಾಥ ಎನ್. ನಾಗರತ್ನ, ಯಮುನಾ ಶ್ರಮದಾನದಲ್ಲಿ ಭಾಗವಹಿಸಿದ್ದರು.

ಶೌರ್ಯ ಸ್ವಯಂಸೇವಕರ ಈ ಸೇವೆ ಶ್ಲಾಘನೆಗೆ ಪಾತ್ರವಾಗಿದೆ. ಮಾವಿನಮನೆ ಘಟಕದ ಸ್ವಯಂಸೇವಕರ ಸೇವೆಯನ್ನು ಗ್ರಾಮಸ್ಥರು ಪ್ರಶಂಸಿಸಿದ್ದಾರೆ.