ಸುಳ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಮರದ ಗೆಲ್ಲು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾದ ಘಟನೆ ನಡುಗಲ್ಲು ಸಮೀಪ ನಡೆದಿದೆ.

ಸ್ಥಳೀಯರಿಂದ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿದ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರಿನ ಸ್ವಯಂಸೇವಕರು ಮರ ತೆರವು ಮಾಡಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ನಾಲ್ಲೂಕು ಘಟಕದ ಸ್ವಯಂಸೇವಕರಾದ ಲೋಹಿತ್. ಕಾರ್ತಿಕ್, ದೀಪಕ್, ಪ್ರಜ್ವಲ್, ಸತೀಶ್, ಅಶ್ವಥ್ ಪಾಲ್ಗೊಂಡಿದ್ದರು.
ಸ್ವಯಂಸೇವಕರ ಸೇವೆಗೆ ತಾಲ್ಲೂಕು ಯೋಜನಾಧಿಕಾರಿ ಮಾಧವ ಗೌಡ ರವರು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.
