ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ತಾಲ್ಲೂಕಿನ ಪೆರ್ನೆ ಗ್ರಾಮದ ಹನುಮಾಜೆ ಹಿಂದೂ ರುದ್ರಭೂಮಿಯನ್ನು ಸಂಪರ್ಕಿಸುವ ರಸ್ತೆ ಹಾಳಾಗಿದ್ದು ಸರಿಪಡಿಸುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸದಸ್ಯರು ನಡೆಸಿದರು.

ಪೆರ್ನೆ ಘಟಕದ ಸ್ವಯಂಸೇವಕರಾದ ಸುರೇಶ, ರಮೇಶ, ಗೋಪಾಲ, ಕೇಶವ,ಸುರೇಶ ಅಶೋಕ, ಜನಾರ್ದನ, ಜಗದೀಶ, ಗಿರೀಶ, ವೆಂಕಪ್ಪ, ಶ್ರೀಧರ, ಜಯಶ್ರೀ, ಅಶ್ಮಿತಾ, ಮಮತಾ, ಚಂದ್ರಾವತಿ, ಸುನಂದಾ ಶ್ರಮದಾನದಲ್ಲಿ ಉಪಸ್ಥಿತರಿದ್ದರು.
