ಕಾಸರಗೋಡು ತಾಲ್ಲೂಕಿನ ಮವ್ವಾರಿನ ಬಾಬು ಎಂಬವರ ಮನೆ ಅತಿಯಾದ ಮಳೆಗಾಳಿಯಿಂದ ಕುಸಿದುಬಿದ್ದ ಘಟನೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸ್ವಯಂಸೇವಕರು ಸಂಕಷ್ಠದಲ್ಲಿರುವ ಕುಟುಂಬಕ್ಕೆ ಆಪತ್ ಕಾಲದಲ್ಲಿ ಆಪ್ತರಕ್ಷಕರಾಗಿ ಮನೆ ರಿಪೇರಿ ಮಾಡಿಕೊಟ್ಟಿದ್ದಾರೆ.

ಮೊವ್ವಾರು ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ವಿಶ್ವನಾಥ, ಆನಂದ, ಪ್ರಕಾಶ ಸಿಂಧು, ದಾಕ್ಷಾಯಿಣಿ, ಉಮೇಶ, ಕೊರಗಪ್ಪ, ನಾಗೇಶ, ಸುರೇಶ,ಅಶೋಕ ಆಚಾರ್ಯ ರವರು ಮಳೆಯನ್ನೂ ಲೆಕ್ಕಿಸದೇ ಮನೆ ರಿಪೇರಿಯನ್ನು ಮಾಡಿಕೊಟ್ಟು ವಾಸ್ತವ್ಯಕ್ಕೆ ಅನುಕೂಲ ಮಾಡಿ ಮಾನವೀಯತೆ ಮೆರೆದಿದ್ದಾರೆ.
