ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ದೊಂತಿಲಡ್ಕ ನಿವಾಸಿ ಯಾದ ಗಿರಿಜರವರು ಸೊಸೆ ಮತ್ತು ಎರಡು ಮೊಮ್ಮಕ್ಕಳೊಟ್ಟಿಗೆ ಇದ್ದು ಇವರಿಗೆ ವಾಸಿಸಲು ಕಟ್ಟಡದ ವ್ಯವಸ್ಥೆ ಇಲ್ಲದೇ ತೊಂದರೆ ಪಡುತ್ತಿದ್ದರು.

ಮಳೆಗಾಲವಾಗಿದ್ದರಿಂದ ಕುಟುಂಬದ ಎಲ್ಲರೂ ಬಹಳ ತೊಂದರೆಯಲ್ಲಿದ್ದರು. ಬಡ ಕುಟುಂಬದವರಾಗಿದ್ದು ಮನೆ ರಿಪೇರಿ ಮಾಡಿಕೊಳ್ಳಲು ಆರ್ಥಿಕ ವ್ಯವಸ್ಥೆ ಇಲ್ಲದೇ ಇರುವುದರಿಂದ ಕಷ್ಠದ ನಡುವೆಯೇ ದಿನದೂಡುತ್ತಿದ್ದರು.
ಇದನ್ನು ಮನಗಂಡು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವತಿಯಿಂದ ಮನೆ ರಚನೆಗೆ ಸಹಕಾರ ನೀಡಲು ಮುಂದಾದಾಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಡಬ ಶೌರ್ಯ ಘಟಕದ ಸ್ವಯಂಸೇವಕರು ಅವರಿಗೆ ವಾಸಿಸಲು ಚಿಕ್ಕ ಕೊಠಡಿ ಯನ್ನು ನಿರ್ಮಿಸಿಕೊಡಲು ಶ್ರಮದಾನ ಮಾಡಲು ಮುಂದಾದರು.

ಮನೆ ರಚನೆಗೆ ಬೇಕಾದ ಸಲಕರಣೆಯನ್ನು ಪ್ರಾಮ ಪಂಚಾಯತ್ ನೀಡಿದೆ. ಶೌರ್ಯ ತಂಡದ ಸ್ವಯಂಸೇವಕರು ಮನೆ ರಚನೆಗೆ ಅಗತ್ಯ ಸ್ವಚ್ಚತೆ, ಕಂಬಗಳ ಅಳವಡಿಕೆ, ಮೇಲ್ಛಾವಣಿ ರಚನೆ, ಶೀಟ್ ಅಳವಡಿಕೆ, ಭದ್ರತೆಯಂತಹ ಕೆಲಸಗಳನ್ನು ಮಾಡಿದರು.
ಈ ಸಂದರ್ಭದಲ್ಲಿ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಬಿವ್ರದ್ದಿ ಅಧಿಕಾರಿಯಾದ ಶ್ರೀ ಬಿ. ನಾರಾಯಣ ಗೌಡ, ಪಂಚಾಯತ್ ಉಪಾಧ್ಯಕ್ಷ ರಾದ ಶ್ರೀ ಚೆಂದ್ರಶೇಖರ ಹಳೆನೂಜಿ, ಆ ವಾರ್ಡ್ ನ ಪಂಚಾಯತ್ ಸದಸ್ಯರಾದ ಶ್ರೀ ಮತಿ ಗಂಗಮ್ಮ, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಯವರು ಉಪಸ್ಥಿತರಿದ್ದರು

ಶೌರ್ಯ ತಂಡದ ಸದಸ್ಯರಾದ ಧನಂಜಯ, ನಳಿನಿ,ಲೋಕೇಶ್,ವೇಣುಗೋಪಾಲ,ಉಮೇಶ್, ಅನಂದ ಪಿ, ಗಣೇಶ್, ಅನಂದ ಕೆ,ಹರೀಶ್ ಶ್ರಮದಾನ ಮಾಡಿದರು. ಸ್ವಯಂಸೇವಕರ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.