ವಿಟ್ಲ ತಾಲ್ಲೂಕಿನ ಬಜತ್ತೂರು ಗ್ರಾಮದ ಮಣ್ಣಿಮೇರು ಎಂಬಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿರುವ ಜಾನಕಿ ಎಂಬವರಿಗೆ ಮನೆ ಇಲ್ಲದೇ ಇದ್ದು ಪಂಚಾಯತ್ ಮತ್ತು ದಾನಿಗಳ ನೆರವಿನಿಂದ ಹೊಸಮನೆ ಕಟ್ಟುವ ಕಾರ್ಯಕ್ಕೆ ನಡೆಯುತ್ತಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಸ್ವಯಂಸೇವಕರು ಹೊಸ ಮನೆ ರಚಿಸಲು ಅಡಿಪಾಯ ಹಾಕುವ ಕೆಲಸವನ್ನು ಮಾಡಿದರು.
ಬಜತ್ತೂರು ಘಟಕದ ಸ್ವಯಂಸೇವಕರಾದ ವಾಸುದೇವಾ, ಮನೋಜ್ ಕುಮಾರ್,ಸುಜಾತ,ವಾಸಪ್ಪ, ಮಮತಾ,ಸುರೇಶ್, ಹರೀಶ್,ಗೋಪಾಲ, ರವೀಂದ್ರ,ರಾಜೇಶ್, ಭವ್ಯ, ಬೇಬಿ ಶ್ರಮದಾನದಲ್ಲಿ ಉಪಸ್ಥಿತರಿದ್ದರು.