ಸುಳ್ಯ ತಾಲ್ಲೂಕಿನ ಐನೆಕಿರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಮುತ್ತ ಮರಗಿಡ ಬಳ್ಳಿಗಳು ತುಂಬಿ ಶಾಲಾ ಮಕ್ಕಳಿಗೆ ನಡೆದಾಡಲು ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಕರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿದರು.

ಶಾಲೆಯ ಕೈತೋಟ ಹಾಗೂ ಕಂಗಿನ ತೋಟದ ತುಂಬಾ ಕಾಡುಗಳು ಬೆಳೆದು ಮಕ್ಕಳಿಗೆ ಓಡಾಡಲು ಕಷ್ಟವಾಗಿತ್ತು. ಅನಗತ್ಯ ಗಿಡಗಳನ್ನು ತೆರವು ಮಾಡಿ ಮಕ್ಕಳು ನಿರಾತಂಕವಾಗಿ ಓಡಾಡಲು ಅನುಕೂಲವಾಗುವಂತೆ ಮಾಡಿದ್ದಾರೆ.

ಶೌರ್ಯ ಘಟಕ ಸುಬ್ರಹ್ಮಣ್ಯ ಇದರ ಸದಸ್ಯರಾದ ಸಾವಿತ್ರಿ, ಸತೀಶ್ , ಲಕ್ಷ್ಮಣ , ಬಾಲಸುಬ್ರಹ್ಮಣ್ಯ, ಸುನಂದ, ನೀಲಾವತಿ, ಮಮತ ಇವರು ಶ್ರಮದಾನದಲ್ಲಿ ಭಾಗವಹಿಸಿದ್ದರು.