ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ರಚಿಸಲಾದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಅಳಿಕೆಯ ಸ್ವಯಂಸೇವಕರು ಕೇಪು ಶಿವ ಕ್ಷೇತ್ರಖಂಡಿಗ ಕ್ಷೇತ್ರದ ಹತ್ತಿರ ದಿನ ನಿತ್ಯ ನೂರಾರು ವಾಹನಗಳ ಸಂಚಾರ ಇರುವ ಸಾರ್ವನಿಕ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು ಎರಡು ಕಿಮೀ ದೂರದವರೆಗೆ (ಕೇಪು ಶಿವ ಕ್ಷೇತ್ರದಿಂದ ಬಡೆಕೋಡಿ) ಬೆಳೆದಿದ್ದ ಗಿಡ, ಗಟ್ಟಿ,ಪೂದೆ, ರಸ್ತೆಯೆಡೆಗೆ ಚಾಚಿದ್ದ ಮರಗಳ ಗೆಲ್ಲುಗಳನ್ನು ತೆರವುಗೊಳಿಸುವ ಶ್ರಮದಾನ ನಡೆಸಿದರು.

ಘಟಕದ ಸದಸ್ಯರಾದ ಪುಟ್ಟಣ್ಣ, ಸರಸ್ವತಿ, ಪ್ರೇಮ, ವಿನೋದ್, ಲಕ್ಷ್ಮಣ, ಕುಶಾಲಪ್ಪ, ರವೀಶ್, ದೀಪಕ್ ಶ್ರಮದಾನದಲ್ಲಿ ಭಾಗವಹಿಸಿದರು.

ನೀರ್ಕಜೆ ಒಕ್ಕೂಟದ ಅಧ್ಯಕ್ಷರಾದ ಭವ್ಯಾ ರವರು ಉಪಸ್ಥಿತರಿದ್ದರು. ಸ್ಥಳೀಯರಾದ ವಿನಯ, ಚಂದಪ್ಪ ಗೌಡ, ಬಾಬು ಮಾಸ್ಟರ್, ರವಿ ಮತ್ತು ಕೆ ಇ ಬಿಯ ಸಿಬ್ಬಂದಿಯಾದ ಸಂಜು ಚವ್ಹಾನ್ ಸಹಕಾರ ನೀಡಿದರು.