ವಿಟ್ಲ ತಾಲ್ಲೂಕಿನ ಮುಡಿಪು ಎಂಬಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರಾದ ಸುಜಾತ ಎನ್ನುವವರ ಮನೆಯ ಸಮೀಪದಲ್ಲಿ ಅಪಾಯಕಾರಿ ಮರವೊಂದು ಇದ್ದು ಮಳೆಗಾಲದಲ್ಲಿ ಬೀಳುವ ಸಂಭವನೀಯತೆ ಇರುವುದರಿಂದ ತೆರವು ಮಾಡಲು ಸಹಕಾರ ನೀಡುವಂತೆ ಶೌರ್ಯ ತಂಡದ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದರು.

ವಯಸ್ಸಾದ ಅತ್ತೆ ಹಾಗೂ ಚಿಕ್ಕ ಮಗಳೊಂದಿಗೆ ವಾಸವಿರುವ ಸುಜಾತಾ ಇವರಿಗೆ ಸಹಕಾರ ನೀಡಲು ತೀರ್ಮಾನಿಸಿದ ಶೌರ್ಯ ತಂಡದ ಸದಸ್ಯರು ಮರ ತೆರವು ಮಾಡಿಕೊಟ್ಟಿರುತ್ತಾರೆ.

ಘಟಕದ ಘಟಕ ಪ್ರತಿನಿಧಿ ರವೀಂದ್ರ, ಸಂಯೋಜಕಿ ಶಕೀಲಾ, ಸದಸ್ಯರಾದ ನಾಗೇಶ್, ಗಣೇಶ್, ಸತೀಶ್, ಮನೋಜ್, ಮೋಹನ್ ದಾಸ್, ಉಮೇಶ್, ಸುಮಿತ, ರತ್ನ, ಶ್ರಮದಾನದಲ್ಲಿ ಭಾಗವಹಿಸಿದ್ದರು.