ಬಾವಿಯಲ್ಲಿ ಬಿದ್ದ ಬೆಕ್ಕಿನ ರಕ್ಷಣೆ, ಮೂರು ದಿನದಿಂದ ಬಾವಿಯಲ್ಲಿದ್ದ ಬೆಕ್ಕು

ಹೆಬ್ರಿ ತಾಲ್ಲೂಕಿನ ಅಜೆಕಾರಿನ ಕೈಕಂಬದ ಸುಜಾತರವರ ಮನೆಯ ಬೆಕ್ಕು ಆಕಸ್ಮಿಕವಾಗಿ ಬಿದ್ದ ಘಟನೆ ನಡೆದಿದೆ.

ಬಿದ್ದ ಕೂಡಲೇ ವಿಷಯ ತಿಳಿದ ಮನೆಯವರು ಬಾವಿಗೆ ಇಳಿದು ರಕ್ಷಣೆಗೆ ಮುಂದಾಗಿದ್ದಾರೆ. ಆಳದ ಬಾವಿಗೆ ಬಿದ್ದಿರುವ ಕಾರಣದಿಂದ ಭಯಗೊಂಡಿದ್ದ ಬೆಟ್ಟು ರಕ್ಷಣೆ ಮಾಡಲು ಹೋದವರ ಕೈಗೆ ಸಿಗದೇ ಬಾವಿಯಲ್ಲಿರುವ ಬಿಲದಲ್ಲಿ ಅಡಗಿಕೊಂಡು ಜೋರಾಗಿ ಚೀರುತ್ತಾ, ಬಾವಿಗೆ ಇಳಿದವರ ಮೇಲೆ ಎರಗಿ ಪರಚಿ ಗಾಯ ಮಾಡಿದೆ.

ಎರಡನೆಯ ದಿನ ಸ್ಥಳೀಯ ಕೆಲವರು ಬಾವಿಗಿಳಿದು ರಕ್ಷಣೆಗೆ ಮುಂದಾಗಿದ್ದರು. ಅವರ ಕೈಗೂ ಸಿಗದೇ ತಪ್ಪಿಸಿಕೊಂಡು ಭಯಗೊಂಡು ಬಾವಿಯಲ್ಲಿಯೇ ಅಡಗಿ ಕುಳಿತಿತ್ತು.

ಶೌರ್ಯ ತಂಡದ ಸ್ವಯಂಸೇವಕರಿಗೆ ಹೇಳಿದರೆ ಅವರು ರಕ್ಷಣೆ ಮಾಡಬಹುದೆಂದು ಸ್ಥಳೀಯರು ತಿಳಿಸಿದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಅಜೆಕಾರಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಗೆ ಮಾಹಿತಿ ನೀಡಿರುತ್ತಾರೆ.

ಸ್ಥಳಕ್ಕೆ ಧಾವಿಸಿದ ಸ್ವಯಂಸೇವಕರು ಬಾವಿಯಿಂದ ಬೆಕ್ಕನ್ನು ರಕ್ಷಣೆ ಮಾಡುವ ಕಾರ್ಯಾಚರಣೆ ನಡೆಸಿರುತ್ತಾರೆ. ಮೂರು ದಿನಗಳಿಂದ ಬಾವಿಯಲ್ಲಿಯೇ ಇದ್ದು ಬಿಲದಲ್ಲಿ ಅಡಗಿಕುಳಿತಿತ್ತು. ರಕ್ಷಣೆಗೆ ಹೋದರವ ಮೇಲೆಯೇ ಎರಗಿ ಪರಚುವ ಸಾಧ್ಯತೆಯೂ ಇತ್ತು.

ಇದನ್ನೆಲ್ಲಾ ಅರಿತು ಸ್ವ ರಕ್ಷಣೆಯೊಂದಿಗೆ ಬೆಕ್ಕನ್ನು ರಕ್ಷಿಸಲು ಶೌರ್ಯ ತಂಡದ ಸ್ವಯಂಸೇವಕರು ನಿರ್ಧರಿಸಿದರು. ಬಾವಿಯಲ್ಲಿ ಇಳಿಯಲು ಪರಿಣತಿ ಹೊಂದಿರುವ ಘಟಕದ ಸದಸ್ಯರಾದ  ಆದಿತ್ಯ ಅವರು ಬಾವಿಯಲ್ಲಿ ಇಳಿದು ಸಾಹಸ ಪಟ್ಟು ಬೆಕ್ಕನ್ನು ಚೀಲದ ಸಹಾಯದಿಂದ ಹಿಡಿದು ಮೇಲೆ ಕಳುಹಿಸಿರುತ್ತಾರೆ.

ಮೂರು ದಿನದಿಂದ ಬಾವಿಯಲ್ಲಿ ಇದ್ದ ಬೆಕ್ಕನ್ನು ಜೀವಂತವಾಗಿ ರಕ್ಷಿಸುವಲ್ಲಿ ಸ್ವಯಂಸೇವಕರು ಯಶಸ್ವೀಯಾಗಿರುತ್ತಾರೆ. ಸ್ವಯಂಸೇವಕರಾದ ವಿಜಯ ಕಾಮತ್, ಪ್ರವೀಣ್, ರಾಜೇಶ್, ರೇಷ್ಮಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂ ಡ ಸ್ವಯಂಸೇವಕರಿಗೆ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.

Share Article
Previous ರಕ್ತದಾನ ಶಿಬಿರ, ನಾಲ್ಕು ಸ್ವಯಂಸೇವಕರಿಂದ ರಕ್ತದಾನ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved