ಹೆಬ್ರಿ ತಾಲ್ಲೂಕಿನ ಪದ್ಮಾವತಿ ಕಲಾಮಂದಿರ ಮುನಿಯಲುವಿನಲ್ಲಿ ರಕ್ತದಾನ ಶಿಬಿರ ಹಾಗೂ ಅರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು.

ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ (ರಿ), ಮುನಿಯಾಲು ಇವರ ವತಿಯಿಂದ ದಿ.ಪ್ರೀತಮ್ ಶೆಟ್ಟಿ ಸ್ಮರಣಾರ್ಥವಾಗಿ ಪದ್ಮಾವತಿ ಕಲಾಮಂದಿರ, ಮುನಿಯಾಲುದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಹೃದಯ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು ಈ ಶಿಬಿರದಲ್ಲಿ ಶೌರ್ಯ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಅಜೆಕಾರುವಿನ ಸದಸ್ಯರು ಪಾಲ್ಗೊಂಡು 4 ಮಂದಿ ರಕ್ತದಾನ ಮಾಡಿದರು.
ಸ್ವಯಂಸೇವಕರಾದ ಅಕ್ಷಯ್, ಪ್ರವೀಣ್, ನಿತ್ಯಾನಂದ ಹಾಗೂ ರಮೇಶ್ ರವರು ರಕ್ತದಾನ ಮಾಡಿರುತ್ತಾರೆ.