ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದಿಂದ ರಚಿಸಲಾದ ನಮ್ಮೂರು ನಮ್ಮಕೆರೆ (ಪುಷ್ಕರಿಣಿ) ಯ ಸುತ್ತಮುತ್ತಲು ಇರುವ ಗಿಡಗಂಟಿಗಳನ್ನು ಕಡಿದು ಸ್ವಚ್ಛತೆ ಮಾಡುವ ಶ್ರಮದಾನವನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ನಡೆಸಿದರು.

ಶೌರ್ಯ ಘಟಕದ ಸದಸ್ಯರಾದ ವಸಂತಿ, ಶಿವಶಂಕರ, ಗಣೇಶ್, ಹರಿಪ್ರಸಾದ್, ರಮೇಶ್ ರೈ, ರಾಘವ ಗೌಡ, ವಸಂತ, ರಾಜೇಶ್, ಲೀಲಾವತಿ, ಪ್ರಮೀಳಾ ರೈ ಶ್ರಮದಾನದಲ್ಲಿ ಭಾಗವಹಿಸಿದರು.

ಕೃಷಿ ಮೇಲ್ವಿಚಾರಕರಾದ ಹರೀಶ್ ರವರ ಮಾರ್ಗದರ್ಶನದಲ್ಲಿ ಶ್ರಮದಾನ ನಡೆಯಿತು. ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಘಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
