ಬೆಳ್ತಂಗಡಿ ತಾಲ್ಲೂಕಿನ ಅರಿಶಿನಮಕ್ಕಿ ಶಿಶಿಲ ಹೆದ್ದಾರಿಯಲ್ಲಿ ಬರ್ಗುಲ ಎಂಬಲ್ಲಿ ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರ ಬಿದ್ದ ಘಟನೆ ನಡೆದಿದೆ.

ಬೈಕ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗೆ ಅದೃಷ್ಠವಶಾತ್ ಯಾವುದೇ ತೊಂದರೆ ಆಗಿರುವುದಿಲ್ಲ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಶಿಶಿಲ-ಅರಶಿನಮಕ್ಕಿಯ ಸದಸ್ಯರು ಸ್ಥಳಕ್ಕೆ ತೆರಳಿ ಮರ ತೆರವಿಗೆ ಸಹಕರಿಸಿದರು.
ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ಕೆಲಸಮಯ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ತಕ್ಷಣವೇ ಶೌರ್ಯ ತಂಡದ ಸದಸ್ಯರು ಮರ ತೆರವು ಮಾಡಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಿದರು.

ಶಿಶಿಲ ಅರಶಿನಮಕ್ಕಿ ಘಟಕದ ಘಟಕ ಪ್ರತಿನಿಧಿ ಅವಿನಾಶ್ ಬಿಡೆ, ಸದಸ್ಯರಾದ ರಮೇಶ್ ಬೈರಗಟ್ಟ, ಕುಶಾಲಪ್ಪ ಗೌಡ, , ರಾಧಾಕೃಷ್ಣ ಗುತ್ತು ಮರ ತೆರವಿಗೆ ಸಹಕರಿಸಿದರು.