ಕುಂದಾಪುರ ತಾಲ್ಲೂಕಿನ ಹಲ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ತಾಗಿಕೊಂಡಂತೆ ಮರ ಉರುಳಿದ ಘಟನೆ ನಡೆದಿದೆ.

ಅತಿಯಾದ ಮಳೆ ಗಾಳಿಯಿಂದ ಈ ದುರಂತ ಸಂಭವಿಸಿದ್ದು ಶಾಲಾ ಶಿಕ್ಷಕರು ನೀಡಿದ ಮಾಹಿತಿಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಳ್ಕೂರು ಘಟಕದ ಸ್ವಯಂಸೇವಕರು ಮರ ತೆರವು ಮಾಡಿರುತ್ತಾರೆ.

ಘಟಕದ ಸದಸ್ಯರಾದ ಸುಧಾಕರ ಹಳ್ನಾಡು, ಸೂರ್ಯಕಾಂತ ಹಳ್ನಾಡು ಸಂತೋಷ್ ಹಾಲ್ ನಾಡು ಇವರು ಮರ ತೆರವು ಕೆಲಸದಲ್ಲಿ ತೊಡಗಿಕೊಂಡರು.