ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಧಾರಾಕಾರವಾಗಿ ಸುರಿಯುತಿರುವ ಮಳೆಯ ಅಬ್ಬರಕ್ಕೆ ಧರ್ಮಸ್ಥಳ ಸಮೀಪದ ಮುಂಡ್ರೂಪಾಡಿ ಪಂಜುರ್ಲಿ ಗುರಿ ಎಂಬಲ್ಲಿ ಶ್ರೀನಿವಾಸ್ ಎನ್ನುವವರ ಮನೆ ಸಮೀಪದಲ್ಲಿ ಬ್ರಹತ್ಗಾತ್ರದ ಗುಡ್ಡ ಕುಸಿದು ಮನೆಯ ಹಿಂಬದಿಯ ಭಾಗ ಕುಸಿದಿರುತದೆ.

ಮಳೆ ಅತಿಯಾದರೆ ಇನ್ನೂ ಸಹ ಗುಡ್ಡ ಕುಸಿದರೆ ಮನೆಯ ಮೇಲೆಯೇ ಬೀಳುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಬಂದ ಕೂಡಲೇ ಧರ್ಮಸ್ಥಳ ಶೌರ್ಯ ಘಟಕದ ಸ್ವಯಂಸೇವಕರು ಸ್ಥಳಕ್ಕೆ ಭೇಟಿ ನೀಡಿ ಅಪಾಯದ ಸಾಧ್ಯತೆಯನ್ನು ಪರಿಶೀಲಿಸಿ ಮನೆಯವರಿಗೆ ಎಚ್ಚರಿಕೆಯಿಂದ ಇರುವ ಬಗ್ಗೆ ಮಾಹಿತಿ ನೀಡಿದರು.

ಏನೇ ಸಮಸ್ಯೆ ಉಂಟಾದರೂ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದ ಸ್ವಯಂಸೇವಕರು ಮಳೆ ಕಡಿಮೆಯಾಗುತ್ತಿದ್ದಂತೆಯೇ ಮಣ್ಣು ತೆರವಿಗೆ ಸಹಕಾರ ನೀಡುತ್ತೇವೆಂದು ಭರವಸೆ ನೀಡಿ ಬಂದಿರುತ್ತಾರೆ.