ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬಂಟ್ರ, ಮರ್ದಾಳ ಇಲ್ಲಿ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಹಾಗೂ ಬ್ಯಾಂಕ್ ಆಫ್ ಬರೋಡ ಸಂಯೋಜಿತ ಸಂಸ್ಥೆಯ ಸಹಕಾರದೊಂದಿಗೆ ತರಕಾರಿ ಕೈತೋಟವನ್ನು ನಿರ್ಮಿಸಲಾಯಿತು.

ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಮರ್ದಾಳ ಘಟಕದ ವತಿಯಿಂದ ಕೈತೋಟವನ್ನು ರಚಿಸಲಾಗಿದ್ದು, ಶಾಲಾ ಆವರಣದಲ್ಲಿ ತರಕಾರಿ ಬೆಳೆಗಳನ್ನು ಬೆಳೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.

ಶೌರ್ಯ ಘಟಕದ ಪ್ರತಿನಿಧಿಯವರಾದ ಉಮೇಶ್ ಗೌಡ ಕೊಣಾಜೆ, ಸಂಯೋಜಕಿಯವರಾದ ಜ್ಞಾನಸೆಲ್ವಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸಂತೋಷ್ ಕೇನ್ಯ, ಮುಖ್ಯಗುರುಗಳಾದ ಪ್ರೇಮ ಕೆ, ಮತ್ತು ಶಿಕ್ಷಕವೃಂದ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಗಣೇಶ್ ಆರಡ್ಕ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರುಗಳಾದ ಭವಾನಿಶಂಕರ್, ಜ್ಞಾನ ಸೇಲ್ವಿ ಭರತ್, ಆಶಾ, ವಿನಯ.G, ಹರೀಶ್, ಧರ್ಮಪಾಲ,, ಉಮೇಶ್, ಪುಂಡರಿಕಕ್ಷ ಶ್ರಮದಾನದಲ್ಲಿ ಪಾಲ್ಗೊಂಡರು.