ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮಾಶಾಸನ ಪಡೆಯುತ್ತಿರುವ ಸದಸ್ಯರಾದ ಪಾರ್ವತಿಯವರ ಮನೆಯ ಸುತ್ತಮುತ್ತ ಸ್ವಚ್ಛತೆ ಮಾಡುವ ಶ್ರಮದಾನವನ್ನು ಶ್ರೀ ಧರ್ಮಸ್ಥಳ ಶೌರ್ಯ ತಂಡ ವಿಟ್ಲ ಘಟಕದ ಸದಸ್ಯರು ನಡೆಸಿರುತ್ತಾರೆ.

ವಲಯ ಮೇಲ್ವಿಚಾರಕರಾದ ಮಾಲತಿ ಇವರು ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದರು. ಸ್ಥಳೀಯ ಸೇವಾ ಪ್ರತಿನಿಧಿ ಬಿಂದು ರವರು ಉಪಸ್ಥಿತರಿದ್ದರು.
ಘಟಕದ ಸದಸ್ಯರಾದ ರಾಜೇಶ್, ಸೀತಾರಾಮ, ಪ್ರವೀಣ್ ಕೆ, ಚಂದ್ರಹಾಸ, ಚಂದ್ರ, ಉಮೇಶ್, ದಮಯಂತಿ, ಯಶೋಧ, ಧನಂಜಯ, ದಿವಾಕರ ಶೆಟ್ಟಿ ಭಾಗವಹಿಸಿದ್ದರು.