ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ಬಜತ್ತೂರು ಇದರ ಸದಸ್ಯರು ಬಡ ಕುಟುಂಬಕ್ಕೆ ಸ್ಥಳೀಯ ದಾನಿಗಳಿಂದ ಮನೆ ಕಟ್ಟಿಕೊಟ್ಟಿದ್ದು ಗೋಡೆಗಳಿಗೆ ಪೇಂಟ್ ಹಚ್ಚುವ ಕೆಲಸವನ್ನು ಮಾಡಿದರು.

ಮಣ್ಣಿ ಮೇರು ಎಂಬಲ್ಲಿ ಒಬಂಟ್ಟಿ ಯಾಗಿ ವಾಸ ಮಾಡುತ್ತಿರುವ ಜಾನಕಿ ಎಂಬವರಿಗೆ ದಾನಿಗಳ ನೆರವಿನಿಂದ ಹೊಸ ಮನೆ ಕಟ್ಟುವ ಕಾರ್ಯಕ್ಕೆ ಶೌರ್ಯ ತಂಡದ ಮುಖಾಂತರ 7ನೇ ಹಂತದ ಸೇವೆಯನ್ನು ಮಾಡಲಾಯಿತು. ಗೋಡೆಗೆ ಪೈಂಟ್ ಹಚ್ಚಿ ಮನೆಗೆ ವಿದ್ಯುತ್ ವೈಯರಿಂಗ್ ಕೆಲಸ ಮಾಡಲಾಯಿತು.
ಸ್ವಯಂಸೇವಕರಾದ ಮನೋಜ್ ಕುಮಾರ್ ಮಣಿಕ್ಕಳ, ಸದಾನಂದ ಶಿಬಾರ್ಲ, ಸುಜಾತ ರಂಜಾಳ, ಗೋಪಾಲ ಬಾರಿಕೆ ಶ್ರಮದಾನದಲ್ಲಿ ಭಾಗವಹಿಸಿದರು.