ವಿಟ್ಲ ತಾಲ್ಲೂಕಿನ ಶಿವಗಿರಿಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಸಾಲೆತ್ತೂರು ಕುಡ್ತಮುಗೇರು ಸದಸ್ಯರು ಶ್ರಮದಾನ ನಡೆಸಿದರು.

ಶ್ರೀ ಸದಾಶಿವ ದೇವಸ್ಥಾನದಲ್ಲಿ ಈಗಾಗಲೇ ಬ್ರಹ್ಮಕಲಶಕ್ಕಾಗಿ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥಮಂಟಪದ ಮೇಚ್ಚಾವಣಿಯ ಮರದ ಕೆತ್ತನೆಯ ಕೆಲಸಕಾರ್ಯಗಳು ನಡೆಯುತ್ತಿದ್ದು, ಇವೆಲ್ಲವನ್ನೂ ದೇವಸ್ಥಾನದ ಎದುರಿನ ಅಂಗಣದಲ್ಲಿ ಮುಂದಿನ ಕೆಲಸಗಳಿಗೆ ಅನುಕೂಲವಾಗುವಂತೆ ಜೋಡಿಸಿ ಇಡುವ ಕೆಲಸವನ್ನು ಸ್ವಯಂಸೇವಕರು ನಡೆಸಿದರು.

ಘಟಕದ ಸದಸ್ಯರಾದ ಗಣೇಶ್ ಕೆ. ಬಿ, ಪುರುಷೋತ್ತಮ್, ರಾಮ ಮೂಲ್ಯ ,ರಂಜಿತ್ ಪೂಜಾರಿ, ಜಯರಾಮ, ನವೀನ್, ಈ ಶ್ವರ ಪೂಜಾರಿ, ಮಾಧವ, ಕುಶಾಲ ಇವರು ಶ್ರಮದಾನದಲ್ಲಿ ಭಾಗವಹಿಸಿದ್ದರು.